3 ನಿಮಿಷದಲ್ಲೇ ಗೆದ್ದ ವಿಜೇಂದರ್

ವೃತ್ತಿಪರ ಬಾಕ್ಸಿಂಗ್‍ನಲ್ಲಿ ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್, ತಮ್ಮ ವೃತ್ತಿ ಜೀವನದ 2ನೇ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ...
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್
Updated on: 
ಡಬ್ಲಿನ್: ವೃತ್ತಿಪರ ಬಾಕ್ಸಿಂಗ್‍ನಲ್ಲಿ ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್, ತಮ್ಮ ವೃತ್ತಿ ಜೀವನದ 2ನೇ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ವಿಜೇಂದರ್ ಸಿಂಗ್, ತಮ್ಮ ಪ್ರತಿಸ್ಪರ್ಧಿ ಇಂಗ್ಲೆಂಡ್‍ನ ಡೀನ್ ಗಿಲ್ಲೆನ್ ವಿರುದ್ಧ ಕೇವಲ ಮೊದಲ ಸುತ್ತಿನ 3 ನಿಮಿಷದಲ್ಲೇ ಮಣಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದರು. ವಿಜೇಂದರ್ ತಮ್ಮ ಆರಂಭಿಕ ಪಂದ್ಯದಲ್ಲಿ ಸೋನಿ ವೈಟಿಂಗ್ ವಿರುದ್ಧ 4 ಸುತ್ತಿನ ಪಂದ್ಯದಲ್ಲಿ ಮೂರನೇ ಸುತ್ತಿನಲ್ಲೇ ಜಯ ಸಾಧಿಸಿದ್ದರು. 
ಪಂದ್ಯದ ಆರಂಭದಿಂದಲೇ ವಿಜೇಂದರ್, ಡೀನ್ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸಿ ಬಿಗಿ ಹಿಡಿತ ಸಾಧಿಸಿದರು. ಬಲವಾದ ಪಂಚ್ ಮತ್ತು ಚುರುಕಿನ ನಡೆ, ರಕ್ಷಣಾತ್ಮಕ ಕೈಶಲ್ಯ ಎಲ್ಲವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ ವಿಜೇಂದರ್ ಸಿಂಗ್ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ವಿಜೇಂದರ್ ಅವರ ಪ್ರಬಲ ಪಂಚ್‍ಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ನಾಟಿಂಗ್‍ಹ್ಯಾಮ್ ಮೂಲದ ಬಾಕ್ಸರ್ ಡೀನ್, ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿದರಾದರೂ, ಭಾರತದ ಬಾಕ್ಸರ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. 
ಮೊದಲ ಹಂತದಲ್ಲಿ ವಿಜೇಂದರ್ ಹೊಡೆದ ಪಂಚ್‍ಗೆ ಗಿಲ್ಲೆನ್ ನೆರಕ್ಕುರುಳಿದರು. ಆ ಹೊಡೆತದ ನಂತರ ಗಿಲ್ಲೆನ್ ಸಂಪೂರ್ಣವಾಗಿ ನಲುಗಿದರು. ಇನ್ನು ಮೊದಲ ಸುತ್ತಿನ ಅಂತಿಮ ಅವಧಿಯಲ್ಲಿ ಬಾಕ್ಸಿಂಗ್ ರಿಂಗ್‍ನ ಮೂಲೆಯಲ್ಲಿ ಪಂಚ್‍ಗಳ ಸುರುಮಳೆಗೈದ ವಿಜೇಂದರ್, ಡೀನ್ ಗಿಲ್ಲೆನ್ ಅಲ್ಲೆ ಕೂರುವಂತೆ ಮಾಡಿದರು. ಈ ವೇಳೆ ರೆಫರಿ ಅವರು ಎದ್ದು ನಿಲ್ಲಲು 10 ಎಣಿಸಿದರು. ಆದರೆ ಪಂದ್ಯದಲ್ಲಿ ಮುಂದುವರಿಯಲು ಡೀನ್ ಹಿಂಜರಿದ ಪರಿಣಾಮ ರೆಫರಿ ಪಂದ್ಯದಲ್ಲಿ ವಿಜೇಂದರ್ ಅವರನ್ನು ಜಯಶಾಲಿ ಎಂದು ಘೋಷಿಸಿದರು. 
ವಿಜೇಂದರ್ ತಮ್ಮ ಮುಂದಿನ ಪಂದ್ಯವನ್ನು ಡಿಸೆಂಬರ್ 19ರಂದು ಆಡಲಿದ್ದು, ಎದುರಾಳಿ ಯಾರೆಂದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ಪಂದ್ಯವನ್ನು ಮ್ಯಾಂಚೆಸ್ಟರ್‍ನಲ್ಲಿ ಆಡಲಿದ್ದಾರೆ. ಮೊದಲ ಬಾರಿಗೆ ಪಂಚ್ ಮಾಡಿದಾಗ ಡೀನ್ ಕೆಳಗೆ ಬಿದ್ದರು. ಆಗ ರೆಫರಿ ಅದು ಆಕಸ್ಮಿಕವಾಗಿ ಬಿದ್ದಿದ್ದು ಎಂದರು. ಹಾಗಾಗಿ ನಾನು ಅನುಮಾನದಲ್ಲಿದ್ದೆ. ಆತ ಮತ್ತೆ ಮೇಲೆದ್ದ ನಂತರ, ಬಲವಾಗಿ ಪೆಟ್ಟು ಬಿದ್ದಿರುವುದು ತಿಳಿಯಿತು. ಅಂತಿಮ ಹಂತದಲ್ಲಿ ನಾನು ಕೊನೆಯ ಪಂಚ್ ನೀಡಿದಾಗ ಆತ ಮತ್ತೆ ಕುಸಿದ. ಆಗ ಡೀನ್ ಮತ್ತೆ ಏಳುವುದಿಲ್ಲ ಎನಿಸಿತು. ರೆಫರಿ ಹತ್ತು ಎಣಿಸಿದರು. ಚಾಂಪಿಯನ್ ಆಗಲು ಬಹು ದೂರದ ಪ್ರಯಾಣವಿದ್ದು, ಇದು ಕೇವಲ ಹಂತ ಹಂತವಾದ ಪ್ರಕ್ರಿಯೆ ಎರಡು ಪಂದ್ಯಗಳ ನಂತರ ಭಾರತದ ಬಾಕ್ಸರ್‍ಗಳು ಸಹ ಕಠಿಣ ಪರಿಶ್ರಮ ಹಾಕಿದರೆ, ಈ ಮಟ್ಟದಲ್ಲಿ ಸೆಣಸಬಹುದು ಎಂಬುದನ್ನು ಹೇಳಲು ಇಚ್ಛಿಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com