ನವದೆಹಲಿ: ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಮೇಲಿರುವ ತೆರಿಗೆ ವಂಚನೆ ಪ್ರಕರಣದ ತನಿಖೆ ನಡೆಸಲು ದೆಹಲಿ ಸರ್ಕಾರ ನೇಮಿಸಿರುವ ದ್ವಿಸದಸ್ಯ ಸಮಿತಿಯು, ಡಿಡಿಸಿಎಯನ್ನು ಅಮಾನತುಗೊಳಿಸಬೇಕೆಂದು ಬಿಸಿಸಿಐಗೆ ಶಿಫಾರಸು ಮಾಡಿದ್ದು, ಬಿಸಿಸಿಐನ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಇನ್ನು ಡಿ. 3ರಿಂದ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಆರಂಭವಾಗಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4ನೇ ಟೆಸ್ಟ್ ಪಂದ್ಯ ಪುಣೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಪಂದ್ಯವು ದೆಹಲಿಯಲ್ಲೇ ನಡೆಯಬೇಕೆಂದರೆ, ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳನ್ನು ನ. 17ರೊಳಗೆ ಬಗೆಹರಿಸಿಕೊಳ್ಳಬೇಕೆಂದು ಬಿಸಿಸಿಐ, ಡಿಡಿಸಿಎಗೆ ಗಡುವು ವಿ„ಸಿತ್ತು. ಕೋರ್ಟ್‍ಗೆ ಮೊರೆ: ಇನ್ನು ದೆಹಲಿ ಪಂದ್ಯವನ್ನು ಕೋಟ್ಲಾದಲ್ಲೇ ನಡೆಸಲು ಅವಕಾಶ ಕಲ್ಪಿಸಬೇಕೆಂದು ಡಿಡಿಸಿಎ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ನಡೆಸಲಿದೆ.