ಶ್ರೀಲಂಕಾದಲ್ಲಿ ಕ್ರಿಕೆಟ್ ಸರಣಿ ಆಡಲು ಭಾರತ-ಪಾಕ್ ಒಪ್ಪಿಗೆ

ಸುಮಾರು ಒಂದು ತಿಂಗಳ ಅನಿಶ್ಚಿತತೆಯ ನಂತರ ಭಾರತ ಹಾಗೂ ಪಾಕಿಸ್ತಾನ 'ತಟಸ್ಥ' ಶ್ರೀಲಂಕಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಡಲು ಒಪ್ಪಿಕೊಂಡಿವೆ.
ರಾಜೀವ್ ಶುಕ್ಲಾ
ರಾಜೀವ್ ಶುಕ್ಲಾ
Updated on: 

ನವದೆಹಲಿ: ಸುಮಾರು ಒಂದು ತಿಂಗಳ ಅನಿಶ್ಚಿತತೆಯ ನಂತರ ಭಾರತ ಹಾಗೂ ಪಾಕಿಸ್ತಾನ 'ತಟಸ್ಥ' ಶ್ರೀಲಂಕಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಡಲು ಒಪ್ಪಿಕೊಂಡಿವೆ.

ಬದ್ಧ ವೈರಿ ರಾಷ್ಟ್ರಗಳು ಡಿಸೆಂಬರ್ 15ರಿಂದ ಮೂರು ಏಕದಿನ ಸರಣಿ ಹಾಗೂ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಈ ವಾರಂತ್ಯಕ್ಕೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ನವಾಜ್ ಷರೀಫ್ ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.

ಶ್ರೀಲಂಕಾದಲ್ಲಿ ಐದು ಪಂದ್ಯಗಳನ್ನು ಆಡಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡವುದಾಗಿ ತಿಳಿಸಿದ್ದಾರೆ.

2008ರ ಮುಂಬೈ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಯಾವುದೇ ಕ್ರಿಕೆಟ್ ಸರಣಿ ನಡೆದಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com