ಕ್ರೀಡೆ

ಆಂಧ್ರ ವಿರುದ್ಧ ಕರ್ನಾಟಕ ತಂಡದ ವಿಜಯ

ಆಂಧ್ರ ವಿರುದ್ಧ ಕರ್ನಾಟಕ ತಂಡದ ವಿಜಯ
63ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ ನಲ್ಲಿ ಮಹಿಳಾ ತಂಡ
Published On :
 ಬೆಂಗಳೂರು: ತನ್ನ ಉತ್ತಮ ಫಾರ್ಮ್  ಮುಂದುವರಿಸಿರುವ ಕರ್ನಾಟಕ ಪುರುಷರ ಕಬಡ್ಡಿ ತಂಡವು, ಶುಕ್ರವಾರ ನಡೆದ 63ನೇ ರಾಷ್ಟ್ರೀಯ ಕಬಡ್ಡಿ  ಚಾಂಪಿಯನ್‍ಶಿಪ್‍ನ ಪಂದ್ಯದಲ್ಲಿ
ಮತ್ತೊಂದು ಗೆಲವು ದಾಖಲಿಸಿದೆ.  ಆಂಧ್ರ ಪ್ರದೇಶ ವಿರುದ್ಧ ಸೆಣಸಿದ ರಾಜ್ಯ  ತಂಡ, 40-10 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಆದರೆ, ಮಹಿಳಾ ತಂಡಕ್ಕೆ ಶುಕ್ರವಾರ ಮಿಶ್ರ ಫಲ ಪ್ರಾಪ್ತವಾದವು. ದಿನದ ಮೊದಲಲ ಹಣಾಹಣಿಯಲ್ಲಿ ಅಸ್ಸಾಂ ವಿರುದ್ಧ 44-16 ಅಂಕಗಳ ಅಂತರದಲ್ಲಿ ಜಯಿಸಿದ ರಾಜ್ಯ  ವನಿತೆಯರು, ಆನಂತರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ 20-36 ಅಂಕಗಳ ಅಂತರದಲ್ಲಿ ಸೋಲು ಕಂಡರು.
ಇತರ ಫಲಿತಾಂಶಗಳು
ಪುರುಷರ ವಿಭಾಗ: ಜಾರ್ಖಂಡ್ ವಿರುದ್ಧ ತಮಿಳುನಾಡಿಗೆ 69-24, ವಿದರ್ಭ ವಿರುದ್ಧ  ಗುಜರಾತ್‍ಗೆ 45-44, ಪಶ್ಚಿಮ ಬಂಗಾಳ  ವಿರುದ್ಧ ಉತ್ತರಾಖಾಂಡ್‍ಗೆ 46-27,  ತ್ರಿಪುರಾ ವಿರುದ್ಧ ಭಾರತೀಯ ರೈಲ್ವೇಸ್  49-17, ಬಿಹಾರ ವಿರುದ್ಧ ತೆಲಂಗಾಣ 37-8  ಮತ್ತು ಗೋವಾ ವಿರುದ್ಧ ದೆಹಲಿ ತಂಡ  25-19 ಅಂತರದ ಜಯ ದಾಖಲಿಸಿದವು.
ಮಹಿಳೆಯರ ವಿಭಾಗ: ತೆಲಂಗಾಣ ವಿರುದ್ಧ ಹಿಮಾಚಲ ಪ್ರದೇಶ 21-49, ಪಾಂಡಿಚೇರಿ ವಿರುದ್ಧ ಉ.ಪ್ರದೇಶ 66-14, ಜಮ್ಮು-ಕಾಶ್ಮೀರ ವಿರುದ್ಧ ಒಡಿಶಾ 44-5 ಹಾಗೂ ಗೋವಾ ವಿರುದ್ಧ ಬಿಹಾರ 23-14 ಅಂತರದಲ್ಲಿ ಗೆಲುವು ಸಾಧಿಸಿದವು. ತೆಲಂಗಾಣ ವಿರುದ್ಧ ಉತ್ತರ ಪ್ರದೇಶ ತಂಡ, 33-16 ಅಂಕಗಳ ಅಂತರದಲ್ಲಿ ಜಯಿಸಿದರೆ, ಚತ್ತೀಸ್‍ಗಢ ತಂಡದ ವಿರುದ್ಧ ಸೆಣಸಿದ ಒಡಿಶಾ ತಂಡ, 38-34 ಅಂಕಗಳ ಅಂತರದಲ್ಲಿ ಜಯಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.