ಸ್ಕ್ವಾಶ್: ಜೋಶ್ನಾ ಚಿನ್ನಪ್ಪ ಸೆಮಿಫೈನಲ್‌ಗೆ

ಭಾರತದ ಖ್ಯಾತ ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ವೇಮುಲ್ಲರ್ ಸ್ಕ್ವಾಶ್ ಓಪನ್ ಪಂದ್ಯಾವಳಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ.
ಜೋಶ್ನಾ ಚಿನ್ನಪ್ಪ
ಜೋಶ್ನಾ ಚಿನ್ನಪ್ಪ

ನವದೆಹಲಿ: ಭಾರತದ ಖ್ಯಾತ ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ವೇಮುಲ್ಲರ್ ಸ್ಕ್ವಾಶ್ ಓಪನ್ ಪಂದ್ಯಾವಳಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ 50.000 ಡಾಲರ್ ಬಹುಮಾನ ಮೊತ್ತದ ಪಿಎಸ್‌ಎ ವಿಶ್ವ ಟೂರ್‌ನಲ್ಲಿನ ಮೊದಲ ಸುತ್ತಿನ ಪಂದ್ಯದಲ್ಲಿ ಜೋಶ್ನಾ ಇಂಗ್ಲೆಂಡ್ ಆಟಗಾರ್ತಿ ಏಳನೇ ಶ್ರೇಯಾಂಕಿತ ಎಮ್ಮಾ ಬಿಡ್ಡೋಸ್ ವಿರುದ್ಧ 4-11, 16-14, 11-7, 11-4 ಅಂತರದಿಂದ ಜಯ ಗಳಿಸಿದ್ದಾರೆ.

ಪಂದ್ಯದ ಆರಂಭಿಕ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಸಿಕೊಂಡ ಜೋಶ್ನಾ ಗೆಲುವು ತಮ್ಮದಾಗಿಸಿಕೊಂಡರು.

ಕ್ವಾರ್ಟರ್ ಫೈನಲ್‌ನಲ್ಲಿ ಮತ್ತೊರ್ವ ಅರ್ಹತಾ ಆಟಗಾರ್ತಿ ಈಜಿಪ್ಟ್‌ನ ಸಲ್ಮಾ ಹ್ಯಾನಿ ಎದುರು 11-9, 8 -11, 5-11, 11-6, 11-9 ಅಂತರದಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com