

ಅಬುಧಾಬಿ: ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಜಯದ ಹೊಸ್ತಿಲಿಗೆ ಬಂದುನಿಂತರೂ ಮಂದ ಬೆಳಕು ಅದರ ಗೆಲುವಿನ ಆಸೆಗೆ ತಣ್ಣೀರೆರಚಿತು. ಪಂದ್ಯದ ಕೊನೇ ದಿನವಾದ ಶನಿವಾರದಂದು ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ 598ಕ್ಕೆ 8 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ನಂತರ ಪಾಕಿಸ್ತಾನ ತಂಡವನ್ನು ಎರಡನೇ ಇನಿಂಗ್ಸ್‍ನಲ್ಲಿ 173 ರನ್ ಗಳಿಗೆ ಆಲೌಟ್ ಮಾಡಿ ಗೆಲ್ಲಲು ಕೇವಲ 99 ರನ್‍ಗಳ ಗುರಿ ಪಡೆಯಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್, ಚುರುಕಿನ ಬ್ಯಾಟಿಂಗ್ ಮಾಡಿ 11 ಓವರ್‍ಗಳಲ್ಲಿ 4 ವಿಕೆಟ್‍ಗೆ 74 ರನ್ ದಾಖಲಿಸಿತ್ತು. ದಿನದಾಟದಲ್ಲಿ ಇನ್ನು 9 ಓವರ್‍ಗಳ ಆಟ ಬಾಕಿ ಉಳಿದಿದ್ದಾಗ ಇಂಗ್ಲೆಂಡ್‍ಗೆ ಕೇವಲ 25 ರನ್ ಮಾತ್ರ ಬೇಕಿತ್ತು. ಆದರೆ ಮಂದ ಬೆಳಕಿನಿಂದ ಅಂಪೈರ್ ಆಟ ನಿಲ್ಲಿಸಿ ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 523ಕ್ಕೆ 8 (ಡಿಕ್ಲೇರ್) ಮತ್ತು 173; ಇಂಗ್ಲೆಂಡ್ 598ಕ್ಕೆ 9 (ಡಿಕ್ಲೇರ್) ಮತ್ತು 74ಕ್ಕೆ 4 (ರೂಟ್ ಅಜೇಯ 33, ಬೇರ್‍ಸ್ಟೊ 15, ಮಲಿಕ್ 25ಕ್ಕೆ 2).