ಆನಂದ್ ಗೆ ಆಘಾತ ನೀಡಿದ ಗಿರಿ

ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್, ಬಿಲ್ಬಾವ್ ಮಾಸ್ಟರ್ಸ್ ಫೈನಲ್ ಚೆನ್ ಟೂರ್ನಿಯಲ್ಲಿ ಹಾಲೆಂಡ್ ನ ಗ್ರಾಂಡ್ ಮಾಸ್ಟರ್...
ವಿಶ್ವನಾಥ್ ಆನಂದ್
ವಿಶ್ವನಾಥ್ ಆನಂದ್
ಬಿಲ್ಬಾವ್: ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್, ಬಿಲ್ಬಾವ್ ಮಾಸ್ಟರ್ಸ್ ಫೈನಲ್ ಚೆನ್ ಟೂರ್ನಿಯಲ್ಲಿ ಹಾಲೆಂಡ್ ನ ಗ್ರಾಂಡ್ ಮಾಸ್ಟರ್ ಅನಿಶ್ ಗಿರಿ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.
ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆನಂದ್, ಪಂದ್ಯದ ಆರಂಭದಲ್ಲೇ ತಪ್ಪು ಹೆಜ್ಜೆ ಇಟ್ಟು ಪಂದ್ಯವನ್ನು ಕಳೆದುಕೊಂಡರು. ಈ ಮೂಲಕ ಆರಂಭಿಕ ಮೂರು ಸುತ್ತಿನಲ್ಲಿ ಡ್ರಾ ಸಾಧಿಸಿದ್ದ ಆನಂದ್ ಈ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ. 
ಆರಂಭದಿಂದಲೂ ಆನಂದ್ ಎದುರಾಳಿ ಮೇಲೆ ಹತೋಟಿ ಸಾಧಿಸಲಾಗಲಿಲ್ಲ. ಆ ಮೂಲಕ ಆನಂದ್ ಕ್ಲಾಸಿಕಲ್ ಚೆಸ್ ಪಂದ್ಯದಲ್ಲಿ ಗಿರಿ ವಿರುದ್ಧ ಮೊದಲ ಬಾರಿಗೆ ಸೋಲನುಭವಿಸಿದ್ದಾರೆ. ಈ ಜಯದೊಂದಿಗೆ ಟೂರ್ನಿಯಲ್ಲಿ 6 ಅಂಕ ಸಂಪಾದಿಸಿರುವ ಗಿರಿ, ಅಗ್ರಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com