ಟೆನಿಸ್ ಕೋರ್ಟ್ ಸ್ವಚ್ಛಗೊಳಿಸಿದ ಫೆಡರರ್

ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿರುವ ಟೆನಿಸ್ ಕೋರ್ಟ್‌ನ್ನು ಗುರುವಾರ ರಾತ್ರಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸ್ವಚ್ಛಗೊಳಿಸಿದರು...
ರೋಜರ್ ಫೆಡರರ್
ರೋಜರ್ ಫೆಡರರ್
Updated on

ನವದೆಹಲಿ: ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿರುವ ಟೆನಿಸ್ ಕೋರ್ಟ್‌ನ್ನು ಗುರುವಾರ ರಾತ್ರಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸ್ವಚ್ಛಗೊಳಿಸಿದರು.

ಗುರುವಾರ ರಾತ್ರಿ ಟೆನಿಸ್ ಅಂಗಣಕ್ಕೆ ಪ್ರಾಕ್ಟೀಸ್ ಮಾಡಲು ಬಂದ ಫೆಡರರ್‌ಗೆ ಅಲ್ಲಿ ಕಂಡದ್ದು, ಇತರ ಆಟಗಾರರು ಬಿಸಾಡಿ ಹೋದ ಬಾಟಲಿಗಳು, ಟವೆಲ್‌ಗಳು.

ಸ್ವಲ್ಪ ಹೊತ್ತು ಪ್ರಾಕ್ಟೀಸ್ ಮಾಡಿದ ನಂತರ ಫೆಡರರ್ ತನ್ನ ತಂಡವರೊಂದಿಗೆ ಆ ಕಸಗಳನ್ನೆಲ್ಲಾ ಹೆಕ್ಕಿ ಅಂಗಣವನ್ನು ಶುಚಿಗೊಳಿಸಿದರು. 



(ಅಂಗಣವನ್ನು ಶುಚಿಗೊಳಿಸುತ್ತಿರುವುದು- ಕೃಪೆ ಟ್ವಿಟರ್)

ವಿಶೇಷವೆಂದರೆ ಅದೇ ಅಂಗಣದಲ್ಲಿ ಫೆಡರರ್‌ಗೆ ಮುನ್ನ ಪ್ರಾಕ್ಟೀಸ್ ಮಾಡಿದ ನೊವಾಕ್‌ಜೋಕೋವಿಕ್ ಸೇರಿದಂತೆ ಹಲವರಿಗೆ ಅಲ್ಲಿ ಕಸ ಬಿದ್ದಿರುವುದು ಕಾಣಲೇ ಇಲ್ಲ!

ವಿಶ್ವದ 2ನೇ ನಂಬರ್ ಆಟಗಾರನಾಗಿರುವ ಫೆಡರರ್‌ನ ಈ ನಡೆ ಎಲ್ಲ ಆಟಗಾರರಿಗೆ ಮಾದರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com