ಜಗಮೋಹನ್ ದಾಲ್ಮಿಯಾ ಅವರ ಆರೋಗ್ಯ ಸ್ಥಿರ

ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ...
ಜಗಮೋಹನ್ ದಾಲ್ಮಿಯಾ
ಜಗಮೋಹನ್ ದಾಲ್ಮಿಯಾ

ಕೊಲ್ಕೋತಾ: ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ತೀವ್ರ ಎದೆ ನೋವಿಗೆ ಒಳಗಾಗಿದ್ದ 75 ವರ್ಷದ ದಾಲ್ಮಿಯಾ ಅವರನ್ನು ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕರೋನರಿ ಆರ್ಟರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಜಗಮೋಹನ್  ದಲ್ಮಿಯಾ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ, ಕಳೆದ ರಾತ್ರಿ ಅವರಿಗೆ ಕರೋನರಿ ಎಂಜಿಯೋಗ್ರಫಿ ಮಾಡಿದ್ದು, ರಕ್ತ ಹೆಪ್ಪುಗಟ್ಟದಂತೆ ಚಿಕಿತ್ಸೆ ನೀಡಲಾಗಿದೆ ವೈದ್ಯರು ತಿಳಿಸಿದ್ದಾರೆ. ಗುರುವಾರ ರಾತ್ರಿ ದಾಲ್ಮಿಯಾ ಅವರಿಗೆ ಹಠಾತನೇ ಎದೆ ನೋವು ಕಾಣಿಸಿಕೊಂಡ ಕಾರಣ ಕರೋನರಿ ಎಂಜಿಯೋಗ್ರಫಿಗಾಗಿ ಬಿಎಂ ಬಿರ್ಲಾ ಹೃದಯ ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ದಾಲ್ಮಿಯಾ ಅವರು ಎದೆ ನೋವಿಗೆ ತುತ್ತಾದ ಕೂಡಲೇ ಅವರನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದರು.

ಭಾರತ ತಂಡದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸೌರವ್ ಗಂಗೂಲಿ, ಆಸ್ಪತ್ರೆಗೆ ಭೇಟಿ ನೀಡಿ ದಾಲ್ಮಿಯಾ ಅವರ ಆರೋಗ್ಯ ವಿಚಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com