ಧರ್ಮಶಾಲಾ ತಾಣ ಆಯ್ಕೆ ಅಚ್ಚರಿ ತಂದಿತು: ಡು ಪ್ಲೆಸಿಸ್

ಪ್ರತಿಷ್ಠಿತ ಭಾರತ ವಿರುದ್ಧದ ಸರಣಿಯನ್ನು ಹಿಮಾಚ್ಛಾದಿತ ತಾಣ ಧರ್ಮಶಾಲಾದಲ್ಲಿ ಆರಂಭಿಸಬೇಕೆಂಬ ನಿರ್ಧಾರ ಅಚ್ಚರಿ ತರಿಸಿದೆ...
ಫಪ್ ಡು ಪ್ಲೆಸಿಸ್
ಫಪ್ ಡು ಪ್ಲೆಸಿಸ್
Updated on

ನವದೆಹಲಿ: ಪ್ರತಿಷ್ಠಿತ ಭಾರತ ವಿರುದ್ಧದ ಸರಣಿಯನ್ನು ಹಿಮಾಚ್ಛಾದಿತ ತಾಣ ಧರ್ಮಶಾಲಾದಲ್ಲಿ ಆರಂಭಿಸಬೇಕೆಂಬ ನಿರ್ಧಾರ ಅಚ್ಚರಿ ತರಿಸಿದೆ ಎಂದು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಫಪ್ ಡು ಪ್ಲೆಸಿಸ್ ಹೇಳಿದ್ದಾರೆ.

ಭಾರತ ಎ ತಂಡದ ವಿರುದ್ಧದ ಏಕೈಕ ಚುಟುಕು ಅಭ್ಯಾಸ ಪಂದ್ಯದ ಮುನ್ನಾ ದಿನವಾದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ಲೆಸಿಸ್, ಹೌದು, ಪ್ರಾಮಾಣಿಕವಾಗಿ ಹೇಳುವುದಾದರೆ ಭಾರತ ವಿರುದ್ಧದ ಸರಣಿಯನ್ನು ಧರ್ಮಶಾಲಾದಲ್ಲಿ ಆರಂಭಿಸಬೇಕೆಂಬ ಸಂಗತಿ ನನ್ನಲ್ಲಿ ಆಶ್ಚರ್ಯ ತರಿಸೀತು ಎಂದರು.

ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್‌ಪರ ಕಿಂಗ್ಲ್ ಇಲೆವೆನ್ ಪಂಜಾಬ್ ವಿರುದ್ಧ ಆಡಿದ್ದ ಪ್ಲೆಸಿಸ್, ಇಲ್ಲಿನ ಪಿಚ್ ವೇಗಿಗಳಿಗೆ ಹೆಚ್ಚು ಆಪ್ತ ಎಂಬುದನ್ನು ಮನಗಂಡಿದ್ದರು.

ಚುಟುಕು ಪಂದ್ಯದ ಒಂದು ಮಹಾನ್ ಸಂಗತಿ ಎಂದರೆ, ನೀವು ವೈವಿಧ್ಯಮಯ ಸ್ಥಳಗಳಲ್ಲಿ ಆಡುವ ಅವಕಾಶ ಪಡೆಯುವುದು. ಧರ್ಮಶಾಲಾ ವಿಕೆಟ್ ಉತ್ತಮ ಬೌನ್ಸಿ ಪಿಚ್‌ನಿಂದ ಕೂಡಿರುವಂಥದ್ದು. ಈ ಅವಕಾಶವನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಲಿದ್ದೇವೆ ಎಂದು ಪ್ಲೆಸಿಸ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com