ಭಾರತಕ್ಕೆ ನಿರಾಸೆ; ಆಸೀಸ್‌ಗೆ ಅಜ್ಲಾನ್ ಷಾ ಕಪ್ ಚಾಂಪಿಯನ್ ಗರಿ

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಎದುರು ಈ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ಭಾರತ ಕಳೆದುಕೊಂಡಿದ್ದು, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಸಿಸ್ ವಿರುದ್ಧ 4-0 ಅಂತದರಲ್ಲಿ ಸರ್ಧಾರ್ ಪಡೆ ಸೋಲುಕಂಡಿದೆ...
ಚಾಂಪಿಯನ್ ಆಸ್ಟ್ರೇಲಿಯಾ (ಚಿತ್ರಕೃಪೆ: ಸ್ಪೋರ್ಟ್ಸ್ ಕೀಡಾ)
ಚಾಂಪಿಯನ್ ಆಸ್ಟ್ರೇಲಿಯಾ (ಚಿತ್ರಕೃಪೆ: ಸ್ಪೋರ್ಟ್ಸ್ ಕೀಡಾ)

ಇಪೋ: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಎದುರು ಈ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ಭಾರತ ಕಳೆದುಕೊಂಡಿದ್ದು, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ  ಆಸಿಸ್ ವಿರುದ್ಧ 4-0 ಅಂತದರಲ್ಲಿ ಸರ್ಧಾರ್ ಪಡೆ ಸೋಲುಕಂಡಿದೆ.

ಹಲವು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕರೂ ಸದುಪಯೊಗ ಪಡಿಸಿಕೊಳ್ಳದ ಭಾರತ ತಂಡ 25ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನಕ್ಕೆ  ತೃಪ್ತಿಪಟ್ಟಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 0-4 ಗೋಲುಗಳಿಂದ ಆಸ್ಟ್ರೇಲಿಯಾ ತಂಡಕ್ಕೆ ಶರಣಾಯಿತು. 6 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ವೈ ಫಲ್ಯ  ಕಂಡ ಭಾರತ ತಂಡ 2ನೇ ಬಾರಿ ರನ್ನರ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

ಆಸೀಸ್ ತಂಡ ದಾಖಲೆಯ 9ನೇ ಬಾರಿ ಅಜ್ಲಾನ್ ಷಾ ಕಪ್ ಮುಡಿಗೇರಿಸಿಕೊಂಡ ಸಾಧನೆ ಮಾಡಿದರೆ, ವಿಲಿಯಮ್ ಕ್ರೇಗ್(25, 35ನೇ ನಿಮಿಷ) ಮತ್ತು 150ನೇ ಪಂದ್ಯವನ್ನಾಡಿದ ಮ್ಯಾಟ್  ಗೋಡ್ಸ್(43, 57) ಆಸೀಸ್ ತಂಡದ ಗೆಲುವಿನ ರೂವಾರಿಗಳಾದರು. ಆದರೆ ಚಾಂಪಿಯನ್ ಪಟ್ಟ ಕೈತಪ್ಪಿದರೂ ಸರ್ದಾರ್ ಸಿಂಗ್ ಪಡೆ ಸ್ಥಿರ ನಿರ್ವಹಣೆಯೊಂದಿಗೆ ಮುಂಬರುವ ಚಾಂಪಿಯನ್  ಟ್ರೋಫಿ ಹಾಗೂ ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್‌ಗೆ ಉತ್ತಮ ಸಿದ್ಧತೆ ನಡೆಸಿಕೊಂಡಿದೆ.

ಭಾರತ ತಂಡ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ 2ನೇ ಬಾರಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದು, 2009ರಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಫೈನಲ್ ನಲ್ಲಿ ಸೋತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com