

ದೋಹಾ: ಪಂಕಜ್ ಅಡ್ವಾಣಿ ಕತಾರ್ ನ ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ಅಡ್ವಾಣಿ ಅವರು ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸಿರಿಯಾದ ಆಟಗಾರ ಕರಮ್ ಫಾತಿಮಾ ಅವರನ್ನು ಸುಲಭವಾಗಿ ಮಣಿಸಿ ಸೆಮಿಗೆ ಲಗ್ಗೆ ಇಟ್ಟರು. ಇನ್ನು ಇದಕ್ಕೂ ಮೊದಲು ಆಡಿದ ಇಸ್ಪ್ರೀತ್ ಚಾಡಾ ಪಂಕಜ್ ಅಡ್ವಾಣಿಗೆ ಕಠಿಣ ಸವಾಲು ನೀಡಿದ್ದರು.
ಮುಂದಿನ ಸುತ್ತಿನಲ್ಲಿ ಭಾರತದ ಆಟಗಾರ ಅಡ್ವಾಣಿ ಥಾಯ್ಲೆಂಡಿನ ಕ್ರಿತ್ಸಾನತ್ ಅವರ ಸವಾಲು ಎದುರಿಸಲಿದ್ದಾರೆ.