ಬಲಶಾಲಿಯಾದಷ್ಟೂ ಸೆಕ್ಸಿ ಆಗಿ ಕಾಣುತ್ತೇನೆ: ಸಾನಿಯಾ ಮಿರ್ಜಾ

ಟೆನಿಸ್ ಆಟದಲ್ಲಿ ಬಲಿಷ್ಠ ಒಡೆತಗಳನ್ನು ಹೊಡೆಯಲು ಹೆಚ್ಚು ಶಕ್ತಿಶಾಲಿಯಾಗಿರಬೇಕು. ಅದಕ್ಕಾಗಿ ನನ್ನನ್ನು ನಾನು ಹೆಚ್ಚು ಹುರಿಗೊಳಿಸಿಕೊಳ್ಳುತ್ತಲೇ ಇರುತ್ತೇನೆ...
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ
Updated on

ಸಿಡ್ನಿ: ಟೆನಿಸ್ ಆಟದಲ್ಲಿ ಬಲಿಷ್ಠ ಒಡೆತಗಳನ್ನು ಹೊಡೆಯಲು ಹೆಚ್ಚು ಶಕ್ತಿಶಾಲಿಯಾಗಿರಬೇಕು. ಅದಕ್ಕಾಗಿ ನನ್ನನ್ನು ನಾನು ಹೆಚ್ಚು ಹುರಿಗೊಳಿಸಿಕೊಳ್ಳುತ್ತಲೇ ಇರುತ್ತೇನೆ ಎಚ್ಜೆಚ್ಚು ಹುರಿಗೊಳಿಸಿಕೊಂಡಷ್ಟು ಅಷ್ಟೇ ಸೆಕ್ಸಿಯಾಗಿ ಕಾಣುತ್ತೇನೆ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಟೆನಿಸ್ ನ ನಂಬರ್ ಒನ್ ಜೋಡಿಯಾದ ಸ್ವೀಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಹಾಗೂ ಸಾನಿಯಾ ಮಿರ್ಜಾ ಇದೀಗ ಫಾರ್ಮ್ ಇಲ್ಲದೆ ಬಳಲುತ್ತಿದ್ದು ಇದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ ಈ ವೇಳೆ ತಮ್ಮನ್ನು ಭೇಟಿಯಾಗಿ ಮಾತನಾಡಿದ ಪತ್ರಕರ್ತರಿಗೆ ಸಾನಿಯಾ ತಮ್ಮ ಫಿಟ್ನೆಸ್ ಹಿಂದಿನ ಲೆಕ್ಕಾಚಾರವನ್ನು ಹೇಳಿದ್ದಾರೆ.

ಟೆನಿಸ್ ಗೆ ತಕ್ಕಂತೆ ನಾನು ನನ್ನ ದೇಹವನ್ನು ಹುರಿಗೊಳಿಸಬೇಕಿದೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ. ಫಿಟ್ ಆಗಿರಲು ಯಾವ ತ್ಯಾಗಕ್ಕೂ ಸಿದ್ದ ಎಂದರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com