ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವಿಶ್ವ ಸೂಪರ್ ಮಿಡಲ್ ವೇಟ್ ಬಾಕ್ಸಿಂಗ್ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ.
ವೃತ್ತಿಪರ ಬಾಕ್ಸಿಂಗ್ ನಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿರುವ ವಿಜೇಂದರ್ ಯುರೋಪಿಯನ್ ಬಾಕ್ಸಿಂಗ್ ಚಾಂಪಿಯನ್ ಕೆರ್ರಿ ಹೋಪ್ ರನ್ನು ಸೋಲಿಸಿ ಡಬ್ಲ್ಯುಬಿಸಿ ಏಷ್ಯಾ ಫೆಸಿಫಿಕ್ ಸೂಪರ್ ಮಿಡ್ಲ್ ವೈಟ್ ಟೈಟನ್ ಅನ್ನು ಮುಡಿಗೇರಿಸಿಕೊಂಡಿದ್ದರು.
ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನಪಡೆದಿರುವ ಕುರಿತು ಪ್ರತಿಕ್ರಿಯಿಸಿರುವ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಇದು ನನ್ನ ಆರಂಭವಷ್ಟೇ. ಮುಂದೊಂದು ದಿನ ಅಗ್ರಸ್ಥಾನ ಅಲಂಕರಿಸುತ್ತೇನೆ. ಇದು ನನ್ನ ಜೀವನದ ಕನಸು ಎಂದು ಹೇಳಿದ್ದಾರೆ.