ಅಭಿನವ್ ಬಿಂದ್ರಾ ಮುರಿದ ಗನ್‌ನಿಂದಲೇ ಫೈನಲ್‌ನಲ್ಲಿ ಸ್ಪರ್ಧಿಸಿದ್ದರು: ಕೋಚ್

ರಿಯೋ ಒಲಿಂಪಿಕ್ಸ್ ನ 10 ಮೀ ಏರ್ ರೈಫಲ್ ನ ಫೈನಲ್ ನಲ್ಲಿ ಮುರಿದ ಗನ್ ನಿಂದ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು...
ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ 10 ಮೀ ಏರ್ ರೈಫಲ್ ನ ಫೈನಲ್ ನಲ್ಲಿ ಮುರಿದ ಗನ್ ನಿಂದ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು ಸ್ಪರ್ಧಿಸಿದ್ದರು ಎಂಬ ಆಘಾತಕಾರಿ ವಿಚಾರವನ್ನು ಕೋಚ್ ಹೀಂಜ್ ರೇನ್ ಕೆಮೀರ್ ಬಹಿರಂಗಗೊಳಿಸಿದ್ದಾರೆ.

ಸ್ಪರ್ಧೆಗೂ ಮುನ್ನ ಬಿಂದ್ರಾ ಕುರ್ಚಿಯಲ್ಲಿ ಗನ್ ಹಿಡು ಕುಳಿತ್ತಿದ್ದರು. ಆಗ ಅವರು ಗನ್ ಸಮೇತ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ಗನ್ ನಲ್ಲಿದ್ದ ಗುರಿಯನ್ನು ನೋಡುವ ಸಾಧನ ಮುರಿದು ಹೋಗಿದೆ ಆದರೂ ಜಗ್ಗದೆ ಅದೇ ಗನ್ ನಿಂದ ಸ್ಪರ್ಧಿಸಿ ನಾಲ್ಕನೇ ಸ್ಥಾನಪಡೆದರು ಎಂದು ಹೇಳಿದ್ದಾರೆ.

ಒಲಿಂಪಿಕ್ಸ್ ಗೆಂದೇ ಬಿಂದ್ರಾ ಆ ಗನ್ ನನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದರು. ದೃಶ್ಯ ಸಾಧನ ಮುರಿದರೂ ಬಿಂದ್ರಾ ಹಿಂಜರಿಯದೇ ಅದರಲ್ಲೇ ಸ್ಪರ್ಧಿಸಿದ್ದಾರೆ. ಸೋತರೂ ವೀರೋಚಿತ ಹೋರಾಟ ನೀಡಿದ್ದಾರೆ ಎಂದು ಕೋಚ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com