ಒಲಿಂಪಿಕ್ಸ್: ಟೀಕೆಗೆ ಗುರಿಯಾಗುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಕೊಹ್ಲಿ ಆತ್ಮಸ್ಥೈರ್ಯ

ರಿಯೋ ಒಲಿಂಪಿಕ್ಸ್ ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗದ ಕ್ರೀಡಾಪಟುಗಳಿಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆತ್ಮಸ್ಥೈರ್ಯ...
ಭಾರತೀಯ ಕ್ರೀಡಾಪಟು-ವಿರಾಟ್ ಕೊಹ್ಲಿ
ಭಾರತೀಯ ಕ್ರೀಡಾಪಟು-ವಿರಾಟ್ ಕೊಹ್ಲಿ

ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗದ ಕ್ರೀಡಾಪಟುಗಳಿಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಭಾರತೀಯ ಕ್ರೀಡಾಪಟುಗಳು ತಮಗೆ ಸಿಗುತ್ತಿರುವ ಶೇ 10ರಷ್ಟು ಸೌಲಭ್ಯದಿಂದ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಲು ಶೇಖಡ 100 ರಷ್ಟು ಪ್ರಯತ್ನಿಸುತ್ತಿರುವುದು ನಿಜಕ್ಕೂ ದೊಡ್ಡ ವಿಷಯ.
ಒಲಿಂಪಿಕ್ಸ್ ನಲ್ಲಿ ಇನ್ನಿತರ  ದೇಶಗಳಿಗೆ ಹೋಲಿಸಿದರೆ ಭಾರತೀಯರಿಗೆ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಸೌಲಭ್ಯ ದೊರೆಯುತ್ತಿರುವುದು ವಿಷಾದನೀಯ ಎಂದು ಕೊಹ್ಲಿ ಹೇಳಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಒಂದೇ ಒಂದು ಪದಕ ಗೆದ್ದರೂ ಅದು ಬಹುದೊಡ್ಡ ಸಾಧನೆ ಎಂದು ಕೊಹ್ಲಿ ಹೇಳಿದ್ದು, ಅಲ್ಲಿಗೆ ಹೋಗಿ ಸ್ಪರ್ಧಿಸಿರುವುದಕ್ಕೆ ನಾವು ಕ್ರೀಡಾಪಟುಗಳಿಗೆ ಹೃದಯಪೂರ್ವಕವಾಗಿ ಹರಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com