ಪಿವಿ ಸಿಂಧುಗೆ ಬಿಎಂಡಬ್ಲ್ಯೂ ಕಾರು ಪ್ರದಾನ ಮಾಡಲಿರುವ ಸಚಿನ್

ಬೆಳ್ಳಿತಾರೆ ಪಿವಿ ಸಿಂಧುಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆ ಪ್ರದಾನ ಮಾಡಲಿದ್ದಾರೆ...
ಪಿವಿ ಸಿಂಧು
ಪಿವಿ ಸಿಂಧು

ಹೈದರಾಬಾದ್: ಬೆಳ್ಳಿತಾರೆ ಪಿವಿ ಸಿಂಧುಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆ ಪ್ರದಾನ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ವಿ. ಚಾಮುಂಡೇಶ್ವರನಾಥ್ ಅವರು ಸಿಂಧುಗೆ ಬಿಎಂಡಬ್ಲ್ಯೂ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದು ಅದನ್ನು ತಮ್ಮ ಆಪ್ತ ಸ್ನೇಹಿತ ಸಚಿನ್ ಅವರ ಕೈಯಲ್ಲಿ ಪ್ರದಾನ ಮಾಡುವುದಾಗಿ ಹೇಳಿದ್ದರು.

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಪಿವಿ ಸಿಂಧು ಅವರಿಗೆ ವಿ.ಚಾಮುಂಡೇಶ್ವರನಾಥ್ ಹಾಗೂ ಸಚಿನ್ ತೆಂಡೂಲ್ಕರ್ ಕಾರು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪುನ್ನಯ್ಯ ಚೌಧರಿ ತಿಳಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದ ಸೈನಾ ನೆಹ್ವಾಲ್ ಅವರಿಗೂ ಸಚಿನ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com