ಮಗುವಿನ ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ರಿಯೋ ಬೆಳ್ಳಿ ಹರಾಜಿಗಿಟ್ಟ ಆಟಗಾರ

ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದು ಇನ್ನೂ ಒಂದು ವಾರ ಕಳೆದಿಲ್ಲ ಅಷ್ಟರಲ್ಲಾಗಲೇ ಕ್ರೀಡಾಪಟು ಒಬ್ಬರು ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿನ...
ಪೀಟರ್ ಮಲಚೋವ್ ಸ್ಕಿ
ಪೀಟರ್ ಮಲಚೋವ್ ಸ್ಕಿ
Updated on

ವಾರ್ಸಾವ್: ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದು ಇನ್ನೂ ಒಂದು ವಾರ ಕಳೆದಿಲ್ಲ ಅಷ್ಟರಲ್ಲಾಗಲೇ ಕ್ರೀಡಾಪಟು ಒಬ್ಬರು ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ರಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನು ಹರಾಜಿಗೆ ಹಾಕಿದ್ದಾರೆ.

ಪೋಲಿಶ್ ನ ಡಿಸ್ಕಸ್ ಥ್ರೋ ಆಟಗಾರ ಪೀಟರ್ ಮಲಚೋವ್ ಸ್ಕಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ 3 ವರ್ಷದ ಮಗುವಿಗೆ ನೆರವಾಗಲು ತಮ್ಮ ಬೆಳ್ಳಿ ಪದಕವನ್ನು ಹರಾಜು ಹಾಕುತ್ತಿದ್ದೇನೆ ಎಂದು ಪೀಟರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಬಾಲಕ ಒಲೆಕ್ ಕಣ್ಣಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಆತನ ತಾಯಿ ಪತ್ರದ ಮೂಲಕ ಸಹಾಯ ಕೋರಿದ್ದು, ಅದಕ್ಕಾಗಿ ತಮ್ಮ ರಿಯೋ ಒಳ್ಳಿ ಪದಕವನ್ನು ಹರಾಜಿಗೆ ಇಡುತ್ತಿರುವುದಾಗಿ ಹೇಳಿದ್ದಾರೆ.

ನನ್ನ ಬೆಳ್ಳಿ ಪದಕ ಉತ್ತಮ ಬೆಲೆಗೆ ಹರಾಜಾದರೆ ಆ ಹಣ ಒಲೆಕ್ ನ ಚಿಕಿತ್ಸೆಗೆ ನೆರವಾಗಲಿದೆ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com