ವಿಜೇಂದರ್ ಒಲಂಪಿಕ್ ಪದಕ ಏನೇನು ಅಲ್ಲ: ಚಾಲೆಂಜರ್ ಫ್ರಾನ್ಸಿಸ್ ಚೆಕಾ

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆದ್ದಿದ್ದ ಕಂಚಿನ ಪದಕ ನನಗೆ ಏನೂ ಅಲ್ಲ ಎಂದು ತಾಂಜಾನಿಯಾದ ಮಾಜಿ ವಿಶ್ವ...
ವಿಜೇಂದರ್ ಸಿಂಗ್, ಫ್ರಾನ್ಸಿಸ್ ಚೆಕಾ
ವಿಜೇಂದರ್ ಸಿಂಗ್, ಫ್ರಾನ್ಸಿಸ್ ಚೆಕಾ
ನವದೆಹಲಿ: 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆದ್ದಿದ್ದ ಕಂಚಿನ ಪದಕ ನನಗೆ ಏನೂ ಅಲ್ಲ ಎಂದು ತಾಂಜಾನಿಯಾದ ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಚೆಕಾ ವಿಜೇಂದರ್ ಸಿಂಗ್ ರನ್ನು ಕೆಣಕಿದ್ದಾರೆ. 
ಡಿಸೆಂಬರ್ 17ರಂದು ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಲೆಂಜರ್ ನಲ್ಲಿ ಫ್ರಾನ್ಸಿಸ್ ಚೆಕಾ ವಿಜೇಂದರ್ ಸಿಂಗ್ ಜತೆ ಸೆಣೆಸಲಿದ್ದು, ನಾನು ವಿಶ್ವ ಚಾಂಪಿಯನ್ ಮತ್ತು ಖಂಡಾಂತರ ಚಾಂಪಿಯನ್ ನನಗೆ ಅವರ ಒಲಿಂಪಿಕ್ಸ್ ಪದಕ ಲೆಕ್ಕಕ್ಕಿಲ್ಲ ಎಂದು ಪಂದ್ಯಕ್ಕೂ ಮುನ್ನ ವಿಜೇಂದರ್ ಸಿಂಗ್ ರನ್ನು ಕೆಣಕಿದ್ದಾರೆ. 
ನನ್ನ ಎದುರು ಫೈಟ್ ಮಾಡಲು ಭಾರತ ವಿಜೇಂದರ್ ಸಿಂಗ್ ರನ್ನು ಆಯ್ಕೆ ಮಾಡಿದ ಬಗ್ಗೆ ನನಗೆ ದುಃಖವಾಗುತ್ತಿದೆ. ಶನಿವಾರ ವಿಜೇಂದರ್ ಆಟಕ್ಕೆ ಭಾರತ ತಲೆತಗ್ಗಿಸಲಿದೆ ಎಂದು ಚೆಕಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 
ಚೆಕಾ ಕಿಡಿನುಡಿಗೆ ಪ್ರತ್ಯುತ್ತರ ನೀಡಿದ ವಿಜೇಂದರ್ ಪಂದ್ಯಕ್ಕೂ ಮುನ್ನ ಎದುರಾಳಿ ಯಾರೆಂದು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾರು ಅತ್ಯುತ್ತಮರು ಅನ್ನುವುದನ್ನು ನಾನು ಚೆಕಾಗೆ ತೋರಿಸುತ್ತೇನೆ. ನಾನು ಶೇಖಡ 110ರಷ್ಟು ಸಿದ್ಧನಾಗಿದ್ದೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com