ಭಾರತೀಯ ಕ್ರೀಡೆಯಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿ ಮಲೀಕ್ ತಾಯಿ ಮೆಚ್ಚುಗೆ

ರಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲೀಕ್ ಅವರ ತಾಯಿ ಸುದೇಶ್ ಮಲೀಕ್, ಒಲಂಪಿಕ್ಸ್ ನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರೀಡೆಯಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿ ಮಲೀಕ್ ತಾಯಿ ಮೆಚ್ಚುಗೆ
Updated on: 
ಚೆನ್ನೈ: ಭಾರತೀಯ ಒಲಂಪಿಕ್ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲೀಕ್ ಅವರ ತಾಯಿ ಸುದೇಶ್ ಮಲೀಕ್, ಒಲಂಪಿಕ್ಸ್ ನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಒಲಂಪಿಕ್ ಒಕ್ಕೂಟದ ವಾರ್ಷಿಕ ಸಭೆಯಲ್ಲಿ 2016ರ ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಸಾಕ್ಷಿ ಮಲೀಕ್ ಗೆ 20 ಲಕ್ಷ ರೂಪಾಯಿ ಹಾಗೂ ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಅವರಿಗೆ 30 ಲಕ್ಷ ರೂಪಾಯಿ ಹಾಗೂ ಸಿಂಧು ಅವರ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರಿಗೆ 15 ಲಕ್ಷ ರೂ ಬಹುಮಾನ ನೀಡಲಾಯಿತು. ಸಾಕ್ಷಿ ಮಲೀಕ್ ಗೆ ನಡೆದ ಸನ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೇಶ್ ಮಲೀಕ್ ನನಗೆ ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ರಿಯೋ ಒಲಂಪಿಕ್ಸ್ ನಲ್ಲಿ ಸಾಕ್ಷಿ ಮಲೀಕ್ ಪದಕ ಗೆದ್ದಾಗಿನಿಂದ ನಮ್ಮ ಜೀವನವೇ ಬದಲಾಗಿದೆ. ಸಾಕ್ಷಿ ಮಲೀಕ್ ಅತ್ಯುತ್ತಮ ಕುಸ್ತಿ ಪಟು ಆಗಬೇಕೆಂದುಕೊಂಡಿದ್ದರು. ಒಲಂಪಿಕ್ಸ್ ಗೆ ಹೋಗುವುದಕ್ಕೂ ಮೊದಲು ಪದಕ ಗೆದ್ದು ಬರುತ್ತೇನೆ ಎಂದು ಹೇಳಿದ್ದರು. ನಗದು ಬಹುಮಾನ ಆಕೆಯ ಸಾಧನೆಯನ್ನು ಗುರುತಿಸಿರುವುದರ ಭಾಗ ಎಂದು ಸುದೇಶ್ ಮಲೀಕ್ ಹೇಳಿದ್ದಾರೆ. 
ಸಾಕ್ಷಿ ಮಲೀಕ್ ಗೆ ಪದಕ ಬಂದಿರುವುದು ಮಹಿಳಾ ಕ್ರೀಡಾಪಟುಗಳಲ್ಲಿ ಉತ್ತೇಜನ ಮೂಡಿಸುತ್ತಿದೆ. ಪ್ರಮುಖವಾಗಿ ರೋಹ್ಟಕ್ ನಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಉತ್ತೇಜನ ದೊರೆಯುತ್ತಿದೆ ಎಂದು ಸುದೇಶ್ ಮಲೀಕ್ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com