

ಕೊಲಂಬಿಯಾ: ಟೆನಿಸ್ ರಂಗದ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್, ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಷಿಸ್ ಒಹಾನಿಯನ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
35 ರ ಹರೆಯದ ಟೆನಿಸ್ ಆಟಗಾರ್ತಿ ಮತ್ತು 33 ರ ಹರೆಯದ ಒಹಾಣಿಯನ್ ಜೊತೆ ಕಳೆದ ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ. ನಿಶ್ಚಿತಾರ್ಥ ವಿಷಯವನ್ನು ಸುದ್ದಿ ಸಂಸ್ಥೆಗೆಳಿಗೆ ಸ್ವತಃ ಸೆರೆನಾ ಮೇಲ್ ಮಾಡಿದ್ದಾರೆ.ಒಂದು ಕವಿತೆ ಮೂಲಕ ತಮ್ಮ ನಿಶ್ಚಿತಾರ್ಥದ ಬಗ್ಗೆ ತಿಳಿಸಿದ್ದಾರೆ. ಆದರೆ ಇನ್ನೂ ವಿವಾಹದ ದಿನಾಂಕದ ಕುರಿತು ಯಾವುದೇ ಸುಳಿವು ನೀಡಿಲ್ಲ.
ಪ್ರಸಕ್ತ ವರ್ಷದ ವಿಂಬಲ್ಡನ್ ಕಿರೀಟವನ್ನು ಗೆದ್ದ ಸೆರೆನಾ, ತಮ್ಮ ವೃತ್ತಿ ಜೀವನದಲ್ಲಿ 71 ಸಿಂಗಲ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವ ರ್ಯಾಂಕಿಂಗ್ ಇತಿಹಾಸದಲ್ಲಿ 186 ವಾರಗಳ ಕಾಲ ನಂಬರ್ ಒಂದರ ಸ್ಥಾನವನ್ನು ಕಾಪಾಡಿಕೊಂಡ ಸಾಧನೆ ಮಾಡಿದ್ದಾರೆ. ಆದರೆ ಕಳೆದ ಸೆಪ್ಟೆಂಬರಿನಲ್ಲಿ ಎಂಜಲಿಕ್ ಕೆರ್ಬೆರ್ ಅವರು ಸೆರೆನಾ ಸ್ಥಾನಕ್ಕೆ ಲಗ್ಗೆ ಇಟ್ಟರು.