64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಷಿಪ್ : ಪ್ರಾಬಲ್ಯ ಮೆರೆದ ರೇಲ್ವೆಸ್

ಬೆಂಗಳೂರು: ನಿರೀಕ್ಷೆಯಂತೆಯೇ ಪ್ರಬಲ ಇಂಡಿಯನ್ ರೈಲ್ವೇಸ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೃಂಭಿಸಲಾಗಿ ಆತಿಥೇಯ ಕರ್ನಾಟಕದ ಸೆಮಿಫೈನಲ್ ಕನಸು ಭಗ್ನ ಕಂಡಿತು.
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಷಿಪ್ ಪಂದ್ಯಾವಳಿಯ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಇಂಡಿಯನ್ ರೈಲ್ವೇಸ್ ವಿರುದ್ಧ ಕರ್ನಾಟಕದ ಪುರುಷರ ತಂಡ1-3(25-16, 22-25, 25-17, 25-22) ಸೆಟ್ ಗಳಿಂದ ಸೋಲನುಭವಿಸಿತು. 90 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಎರಡನೇ ಸೆಟ್ ಒಂದನ್ನು ಗೆದ್ದದ್ದು ಬಿಟ್ಟರೆ, ಮತ್ತೆ ರೈಲ್ವೇಸ್ ಗೆ ಸರಿಸಾಟಿಯಾಗಿ ನಿಲ್ಲಲು ಕರ್ನಾಟಕ ವಿಫಲವಾಯಿತು.
ರಾಜ್ಯ ವನಿತೆಯರಿಗೆ ನಿರಾಸೆ: ಇತ್ತ ಮಹಿಳೆಯರ ವಿಭಾಗದಲ್ಲಿ ಕೂಡ ರಾಜ್ಯ ವನಿತೆಯರು ನಿರೀಕ್ಷಿತ ಸೋಲನುಭವಿಸಿದರು. ಒಂದು ತಾಸಿನ ಕಾದಾಟದಲ್ಲಿ ಬಲಾಢ್ಯ ಇಂಡಿಯನ್ ರೈಲ್ವೇಸ್ ವನಿತೆಯರು ಆಕ್ರಮಣಕಾರಿ ಆಟವಾಡಿ ರಾಜ್ಯದ ವಿರುದ್ಧ 25-17, 25-3, 25-8 ರಿಂದ ಜಯ ಪಡೆದರು. ಮೊದಲ ಸೆಟ್ ನಲ್ಲಿ ಒಂದಷ್ಟು ಪ್ರತಿರೋಧ ತೋರಿದ ಕರ್ನಾಟಕ ವನಿತೆಯರು, ಎರಡು ಮತ್ತು ಮೂರನೇ ಸೆಟ್ ನಲ್ಲಂತೂ ಅತ್ಯಂತ ಕಳಪೆ ಆಟವಾಡಿ ದಯನೀಯ ಸೋಲನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


