
ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಪಿನ್ನರ್‍ಗಳು ಈ ಪರಿಯಲ್ಲಿ ಕೆಟ್ಟ ದಿನವನ್ನು ಎದುರಿಸುತ್ತಾರೆ ಎಂದು ಭಾವಿಸಿರಲಿಲ್ಲ. ತಂಡದ ಸೋಲಿಗೆ ಇದು ಪ್ರಮುಖ ಕಾರಣ ಎಂದು ಭಾರತ ತಂಡದ ನಾಯಕ ಎಂ.ಎಸ್. ಧೋನಿ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧೋನಿ, ಆಸ್ಟ್ರೇಲಿಯಾ ವಿರುದ್ಧ ನಾವು ಬ್ಯಾಟಿಂಗ್‍ನಲ್ಲಿ ತೋರಿದ ಮಿಂಚಿನ ಪ್ರದರ್ಶನವನ್ನು ಬೌಲಿಂಗ್‍ನಲ್ಲಿ ತೋರಲಿಲ್ಲ. ಏರಾನ್ ಪಿsಂಚ್ ಹಾಗೂ ಡೇವಿಡ್ ವಾರ್ನರ್ ರಂತಹ ಅಪಾಯಕಾರಿ ಆಟಗಾರರನ್ನು ಯುವ ವೇಗಿ ಬರೀಂದರ್ ಸ್ರನ್ ಔಟ್ ಮಾಡಿ ಸರಿ ದಿಸೆಯಲ್ಲಿ ಹೆಜ್ಜೆ ಇರಿಸಿದ್ದೆವು. ಆದರೆ, ಸ್ಪಿನ್ನರ್‍ಗಳು ನಿರೀಕ್ಷಿತ ಪ್ರದರ್ಶನ ನೀಡದೆ ಹೋದದ್ದು ಪಂದ್ಯ ಕೈಚೆಲ್ಲಿ ಹೋಗಲು ಕಾರಣವಾಯಿತು ಎಂದರು.
'ಅಶ್ವಿನ್ 9 ಓವರ್‍ಗಳಲ್ಲಿ 2 ವಿಕೆಟ್ ಪಡೆದರೂ, 69 ರನ್ ನೀಡಿದರೆ, ಜಡೇಜಾ 9 ಓವರ್‍ನಲ್ಲಿ ವಿಕೆಟ್ ಗಳಿಸದೆ 61ಕ್ಕೆ ರನ್ ನೀಡಿ ದುಬಾರಿಯಾದರು. ಪಂದ್ಯದಲ್ಲಿ ದಾಳಿಯ ಹೊರೆಯನ್ನು ಹಂಚಿಕೊಳ್ಳಲು ಸ್ಪಿನ್ನರ್‍ಗಳನ್ನು ಬಳಸುತ್ತಿದ್ದೆ. ಆದರೆ ಸ್ಪಿನ್ನರ್‍ಗಳಿಗೆ ಈ ರೀತಿಯಾದ ಕೆಟ್ಟ ದಿನವಾಗಿರುತ್ತದೆ ಎಂಬುದು ಗೊತ್ತಿರಲಿಲ್ಲ. ಪಿಚ್ ಯಾವುದೇ ರೀತಿಯಲ್ಲಿ ಸ್ಪಿನ್ ಗೆ ಸಹಕಾರಿಯಾಗಿರಲಿಲ್ಲ. ಇದನ್ನು ಸ್ಮಿತ್ ಮತ್ತು ಬೇಯ್ಲಿ ಸಂಪೂರ್ಣವಾಗಿ ಬಳಸಿಕೊಂಡು ಇನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಸ್ಪಿನ್ನರ್‍ಗಳು ಬೌಂಡರಿ ನೀಡಿದಾಗಲೇ ಒತ್ತಡಕ್ಕೆ ಸಿಲುಕಿದೆವು'' ಎಂದೂ ಧೋನಿ ಅಭಿಪ್ರಾಯಪಟ್ಟರು.
Advertisement