ಟೀಂ ಇಂಡಿಯಾಕ್ಕೆ ಪ್ರತ್ಯೇಕ ಕೋಚ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವುದು ಬಿಸಿಸಿಐನ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ, ಟೀಂ ಇಂಡಿಯಾಕ್ಕೆ ಹೊಸ ಕಾಯಕಲ್ಪ ನೀಡಲು ಚಿಂತನೆ ನಡೆಸಿದೆ. ಅದರ ಮೊದಲ ಅನುಷ್ಠಾನವೆಂಬಂತೆ, ಈ ವರ್ಷ...
ಟೀಂ ಇಂಡಿಯಾಕ್ಕೆ ಪ್ರತ್ಯೇಕ ಕೋಚ್
ಟೀಂ ಇಂಡಿಯಾಕ್ಕೆ ಪ್ರತ್ಯೇಕ ಕೋಚ್

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವುದು ಬಿಸಿಸಿಐನ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ, ಟೀಂ ಇಂಡಿಯಾಕ್ಕೆ ಹೊಸ ಕಾಯಕಲ್ಪ ನೀಡಲು ಚಿಂತನೆ ನಡೆಸಿದೆ. ಅದರ ಮೊದಲ ಅನುಷ್ಠಾನವೆಂಬಂತೆ, ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ನಂತರ ಪ್ರತ್ಯೇಕ ಚುಟುಕು ಕ್ರಿಕೆಟ್ಗಾಗಿ ಪೂರ್ಣಾವ„ಯ ಕೋಚ್ ನೇಮಿಸಲಾಗುತ್ತದೆ.

ಪ್ರತ್ಯೇಕ ಕೋಚ್ ನೇಮಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಆದರೆ, ಇದರ ಜತೆಯಲ್ಲಿಯೇ ಅವರು ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಅನುಭವಿಸಿರುವ ಮುಖಭಂಗದಿಂದ ಬೇಸತ್ತಿರುವ ಸುಳಿವನ್ನೂ ನೀಡಿದರು. ಅವರ ಮಾತುಗಳಿಂದ ಅದು ಸ್ಪಷ್ಟವಾಗುತ್ತಿತ್ತು. ``ಈ ಬಾರಿಯ ವಿಶ್ವ ಟಿ20ವರೆಗೆ ರವಿಶಾಸ್ತ್ರಿಯವರೇ ತಂಡದ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ಟೀಂ ಇಂಡಿಯಾಕ್ಕೆ ಪೂರ್ಣ ಪ್ರಮಾಣದ ಕೋಚ್ ಅಗತ್ಯವಿ ದೆ ಎಂಬ ಬೇಡಿಕೆ ತುಂಬಾ ದಿನಗಳಿಂದ ಇತ್ತು. ಇದರ ಮಹತ್ವವನ್ನು ಅರಿತಿರುವ ಬಿಸಿಸಿಐ, ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ಕೋಚ್ ಅನ್ನು ನೇಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ'' ಎಂದು ನೇರವಾಗಿ ಶಾಸಿuಉ ವಿರುದ್ಧ ಅಸಮಾಧಾನ ತೋಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com