ಕ್ರೀಡೆ

ರಿಯೋ ೨೦೧೬ ಒಲಂಪಿಕ್ಸ್ ನ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳ ಮಾರಾಟ

ರಿಯೋ ಒಲಂಪಿಕ್ಸ್ ೨೦೧೬ ರ ಕೊನೆಯ ಹಂತದ ಟಿಕೆಟ್ ಮಾರಾಟದ ಮೊದಲ ಎರಡು ದಿನಗಳಲ್ಲಿ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳನ್ನು ಬ್ರೆಜಿಲ್ ನ ನಾಗರಿಕರಿಗೆ

ರಿಯೋ ೨೦೧೬ ಒಲಂಪಿಕ್ಸ್ ನ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳ ಮಾರಾಟ
ಸಾಂದರ್ಭಿಕ ಚಿತ್ರ
Published On :
ರಿಯೋ ಡಿ ಜಾನೆರೋ: ರಿಯೋ ಒಲಂಪಿಕ್ಸ್ ೨೦೧೬ ರ ಕೊನೆಯ ಹಂತದ ಟಿಕೆಟ್ ಮಾರಾಟದ ಮೊದಲ ಎರಡು ದಿನಗಳಲ್ಲಿ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳನ್ನು ಬ್ರೆಜಿಲ್ ನ ನಾಗರಿಕರಿಗೆ ಮಾರಾಟ ಮಾಡಲಾಗಿದೆ. 
ಅಥ್ಲೆಟಿಕ್ಸ್, ಈಜು, ಫುಟ್ಬಾಲ್, ಹ್ಯಾಂಡ್ ಬಾಲ್, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ, ಬ್ಯಾಸ್ಕೆಟ್ ಬಾಲ್. ವಾಲಿ ಬಾಲ್, ಬೀಚ್ ವಾಲಿ ಬಾಲ್, ಟೆನಿಸ್, ಜುಡೊ ಮತ್ತು ಜಿಮ್ನ್ಯಾಸ್ಟಿಕ್ಸ್ ಆಟಗಳ ಟಿಕೆಟ್ ಗಳಿಗೆ ಅತಿ ಹೆಚ್ಚು ಬೇಡಿಕೆಯಿತ್ತು ಎಂದು ತಿಳಿದುಬಂದಿದೆ. 
"ಸುಮಾರ್ ೫೦೦೦೦೦ ಟಿಕೆಟ್ ಗಳು ಲಭ್ಯವಿದ್ದು, ಅತೀವ ಬೇಡಿಕೆಯಿದೆ. ನಿಮಿಷಕ್ಕೆ ೩೦೦೦ ಟಿಕೆಟ್ ಗಳಷ್ಟು ಬಿಕರಿಯಾಗುತ್ತಿವೆ" ಎಂದು ಆಯೋಜಕರು ತಿಳಿಸಿದ್ದಾರೆ. 
ಅಂತರ್ಜಾಲ ತಾಣದ ಮೂಲಕ ಪ್ರದೇಶಿಕ ನಿವಾಸಿಗಳು ಟಿಕೆಟ್ ಕೊಂಡುಕೊಳ್ಳಬಹುದಾಗಿದ್ದರೆ, ಅಧಿಕೃತ ಮಾರಾಟಗಾರರ ಮೂಲಕ ವಿದೇಶಿಯರು ಕೊಂಡುಕೊಳ್ಳಬೇಕಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.