ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್‌ಗೆ ಬೆಂಗಳೂರು ಬುಲ್ಸ್ ತಿವಿತ

4ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಬೆಂಗಳೂರು ಬುಲ್ಸ್ ತಂಡ 29-27ರಿಂದ ಮಣಿಸಿದೆ...
ಪುಣೇರಿ ಪಲ್ಟಾನ್
ಪುಣೇರಿ ಪಲ್ಟಾನ್

ಹೈದರಾಬಾದ್: 4ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಬೆಂಗಳೂರು ಬುಲ್ಸ್ ತಂಡ 29-27ರಿಂದ ಮಣಿಸಿದೆ.

ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲಿನ ಸುಳಿಯಲ್ಲಿತ್ತು. ಅಂತಿಮ ಕ್ಷಣದಲ್ಲಿ ಬುಲ್ಸ್ ತಂಡದ ಸ್ಟಾರ್ ರೈಡರ್ ರೋಹಿತ್ ಕುಮಾರ್ ನಡೆಸಿದ ರೋಚಕ ಸೂಪರ್ ರೈಡ್ ಮೂಲಕ ಬೆಂಗಳೂರು ತಂಡ ಜಯದ ನಗೆ ಬೀರುವಂತೆ ಮಾಡಿದರು.

ಹೊಸ ಮುಖಗಳೊಂದಿಗೆ ಕಣಕ್ಕಿಳಿದಿರುವ ಬುಲ್ಸ್ ತಂಡ ಕಳೆದ ಪಂದ್ಯದಲ್ಲಿ ಕಾಶಿಲಿಂಗ್ ಅಡಕೆ ಸಾರಥ್ಯದ ದಬಾಂಗ್ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com