

ಬೆಂಗಳೂರು: ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬೆಂಗಳೂರಿನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ಈ ಭಾರಿ ಬಲಿಷ್ಠ ವಿದೇಶಿ ಆಟಗಾರರ ಸವಾಲನ್ನು ಮೆಟ್ಟಿನಿಲ್ಲುವ ಸಲುವಾಗಿ ತಮ್ಮ ಎದುರು ಕೋರ್ಟ್ ನಲ್ಲಿ ನಾಲ್ವರು ಪುರುಷ ಆಟಗಾರರನ್ನು ನಿಲ್ಲಿಸಿಕೊಂಡು ಆಟ ಆಡುತ್ತಿದ್ದಾರೆ.
26 ವರ್ಷದ ಸೈನಾ ನೆಹ್ವಾಲ್ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಮಧ್ಯೆ ಭಾರತ ಸರ್ಕಾರ ನೀಡುವ ಅರ್ಜುನ್ ಅವಾರ್ಡ್, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ,