

ನವದೆಹಲಿ: ಸೆಲ್ಫೀ ಹುಚ್ಚಿಗೆ ಅನೇಕರು ಬಲಿಯಾಗುತ್ತಿದ್ದಾರೆ. ರಾಷ್ಟ್ರ ಮಟ್ಟದ ಅಥ್ಲೀಟ್ ಒಬ್ಬರು ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ಘಟನೆ ಭೂಪಾಲ್ ನಲ್ಲಿ ನಡೆದಿದೆ.
ಪೂಜಾ ಕುಮಾರಿ ಸಾವನ್ನಪ್ಪಿದ ಕ್ರೀಡಾ ಪಟು. ಸೆಲ್ಫೀ ತೆಗೆದುಕೊಳ್ಳಲು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ಮೂಲದ ಪೂಜಾ ಎರು ವರ್ಷಗ ಹಿಂದೆ ಸಾಯ್ ಕೇಂದ್ರಕ್ಕೆ ದಾಖಲಾಗಿದ್ದರು.
ಭೂಪಾಲ್ ನ ಸಾಯ್ ಕೇಂದ್ರದ ಬಳಿಯಿರುವ ಕೆರೆಗೆ ಪೂಜಾ ಬಿದ್ದಿದ್ದಾರೆ. ಅವರಿಗೆ ಈಜು ಬರುತ್ತಿರಲಿಲ್ಲ. ಆಕೆಯ ಜೊತೆಗಿದ್ದ ಇನ್ನಿಬ್ಬರು ಸಹಪಾಠಿಗಳಿಗೂ ಈಜು ಬರುತ್ತಿರಲಿಲ್ಲ. ಸಹಾಯಕ್ಕಾಗಿ ಆ ಇಬ್ಬರು ಸಹಪಾಠಿಗಳು ಹಾಸ್ಟೆಲ್ ಬಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಪೂಜ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.