ಕ್ರೀಡೆ

ಮೋದಿ ಎಂದರೆ 'ಆತ್ಮ ನಂಬಿಕೆ': ವಿರಾಟ್ ಕೊಹ್ಲಿ

ಮೋದಿ ಎಂದರೆ 'ಆತ್ಮ ನಂಬಿಕೆ': ವಿರಾಟ್ ಕೊಹ್ಲಿ
ನರೇಂದ್ರ ಮೋದಿ ಮತ್ತು ವಿರಾಟ್ ಕೊಹ್ಲಿ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಇಬ್ಬರು ದೇಶದ ಅತ್ಯಂತ ಪ್ರಸಿದ್ದ ವ್ಯಕ್ತಿಗಳಾಗಿದ್ದಾರೆ. ಮೋದಿ ಭಾರತದ ಅತಿ ಪ್ರೀತಿ ಪಾತ್ರ ರಾಜಕಾರಣಿಯಾಗುತ್ತಿದ್ದರೆ, ಕೊಹ್ಲಿ ಕೂಡ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಹೊಂದುತ್ತಿದ್ದಾರೆ.

ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೊಹ್ಲಿ ಟ್ವೀಟರ್ ನಲ್ಲಿ  ಶುಭಾಶಯ ಕೋರಿದ್ದರು. ಇದಾದ ನಂತರ ಕೊಹ್ಲಿ ಕೂಡ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಜನಪ್ರಿಯರಾದರು.

ಇಬ್ಬರು ಕೂಡ ಇಲ್ಲಿಯವರೆಗೂ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭೇಟಿಯಾಗಿಲ್ಲ. ಮೋದಿ ಬಗ್ಗೆ  ಹೇಳಿ ಎಂದು ವಿರಾಟ್ ಕೊಹ್ಲಿ ಅವರನ್ನು ಖಾಸಗಿ ಚಾನಲ್ ವೊಂದು ಕೇಳಿದ್ದಕ್ಕೆ ಕೊಹ್ಲಿ ಹೇಳಿದ್ದು ಅವರೊಬ್ಬ ಆತ್ಮ ನಂಬಿಕೆಯ ವ್ಯಕ್ತಿ ಎಂದು ಹೇಳಿದ್ದಾರೆ.

ನನಗೂ ಕೂಡ ನನ್ನ ಕ್ರಿಕೆಟ್ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇದ್ದು, ಅದರಿಂದ ನನಗೆ ಒಳ್ಳೆಯ ಆಟವಾಡಲು ಸಾಧ್ಯವಾಗುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.