

ಜಿನೀವಾ: ಜೈಕಾ ವೈರಸ್ ಹರಡುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಇದೇ ವರ್ಷದ ಆಗಸ್ಟ್‌ನಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಬೇರೆಡೆಗೆ ಸ್ಥಳಾಂತರಿಸ ಬೇಕು ಎನ್ನುವ ಒತ್ತಡ ಕೇಳಿ ಬರುತ್ತಿದೆ. ಆದರೆ, ಒಲಿಂಪಿಕ್ಸ್ ಕೂಟವನ್ನು ಸ್ಥಳಾಂತರಿಸುವ ಯಾವುದೇ ಯೋಚನೆ ನಮ್ಮ ಮುಂದಿಲ್ಲ ಎಂದು ಬ್ರೆಜಿಲ್ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.
150ಕ್ಕೂ ಅಂತರರಾಷ್ಟ್ರೀಯ ವೈದ್ಯ ಕೀಯ ಪರಿಣಿತರು ಒಲಿಂಪಿಕ್ಸ್ ಸ್ಥಳಾಂತರಿಸುವುದು ಸರಿಯಾದ ನಿರ್ಧಾರ. ಇಲ್ಲವಾದರೆ ವೈರಸ್ ಹರಡುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಬಗ್ಗೆ ಎಚ್ಚರಿಕೆ ಮೂಡಿಸಲು 150 ವೈದ್ಯರು, ವಿಜ್ಞಾನಿಗಳು ಮತ್ತು ಸಂಶೋಧಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದೇ ವರ್ಷ ಆಗಸ್ಟ್‌ನಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ನಂತರ ಪ್ಯಾರಾ ಒಲಿಂಪಿಕ್ಸ್ ಕೂಡ ಆಯೋಜನೆಯಾಗಿದೆ. ಈ ವೇಳೆ ಯಾವುದೇ ಅಪಾಯವಾಗಬಾರದು ಎನ್ನುವ ಕಾರಣಕ್ಕಾಗಿ ವೈದ್ಯರು ಈ ಎಚ್ಚರಿಕೆ ನೀಡಿದ್ದಾರೆ.