

ಮೆಕ್ಸಿಕೋ: ಅಪಹಣಗೊಂಡಿದ್ದ ಮೆಕ್ಸಿಕೋದ ಫುಟ್ಬಾಲ್ ಆಟಗಾರ ಆಲನ್ ಪುಲಿಡೊ ಅಪಹರಣಕಾರನೇ ತಲೆಸುತ್ತಿ ಬೀಳುವಂತೆ ಅವನ ಮೇಲೆ ದಾಳಿ ಮಾಡಿ, ಪೊಲೀಸರ ಸಹಾಯದೊಂದಿಗೆ ತಪ್ಪೊಸಿಕೊಂಡ ಘಟನೆ ನಡೆದಿದೆ ಎಂದು ಮಾಧ್ಯಮ ವರದಿ ಹೇಳಿದೆ.
೨೫ ವರ್ಷದ ಪುಲಿಡೊ ಅವರನ್ನು ಅಪಹರಣಕಾರರು ಬಂಧಿಸಿಟ್ಟಿದ್ದರು. ಆದರೆ ಅಪಹರಣಕಾರನ ಜೊತೆಗೆ ಗುದ್ದಾಡಿ ಅವನ ಪಿಸ್ತೂಲನ್ನು ಕೆಳಗೆ ಬೀಳಿಸಿ ಮೆಕ್ಸಿಕೋದ ತುರ್ತು ದೂರವಾಣಿ ಸಂಖ್ಯೆಗೆ ಅಪಹರಣಕಾರನ ಮೊಬೈಲ್ ನಿಂದಲೇ ಕರೆ ಮಾಡಿದ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶನಿವಾರ ಔತಣಕೂಡ ಮುಗಿಸಿ ಹಿಂದಿರುಗುವಾಗ ರಾತ್ರಿ ೧೧:೩೦ಕ್ಕೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಾಲ್ವರು ಅಪಹರಣಕಾರರು ಪುಲಿಡೋನನ್ನು ಅಪಹರಿಸಿದ್ದಾರೆ.
ಬಿಡುಗಡೆಗೊಳಿಸಿದ ನಂತರ ಪುಲಿಡೊ ಅವರನ್ನು ವೈದ್ಯಕೀಯ ಮತ್ತು ಮಾನಸಿಕ ಪರಿಶೀಲನೆಗೆ ಒಳಪಡಿಸಿ ತನಿಖಾಧಿಕಾರಿಗಳು ಹೇಳಿಕೆ ಪಡೆದಿದ್ದಾರೆ.
ಆರೋಪಿಗಳ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.