ಹೈಜಂಪ್ ನಲ್ಲಿ ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್

32ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನ ಬಾಲಕರ ಹೈಜಂಪ್ ವಿಭಾಗದಲ್ಲಿ ದೆಹಲಿಯ ತೇಜಸ್ವಿನ್ ಶಂಕರ್ 12 ವರ್ಷಗಳ ರಾಷ್ಟ್ರೀಯ...
ತೇಜಸ್ವಿನ್ ಶಂಕರ್
ತೇಜಸ್ವಿನ್ ಶಂಕರ್
Updated on
ಕೊಯ್ಯಮತ್ತೂರು: 32ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನ ಬಾಲಕರ ಹೈಜಂಪ್ ವಿಭಾಗದಲ್ಲಿ ದೆಹಲಿಯ ತೇಜಸ್ವಿನ್ ಶಂಕರ್ 12 ವರ್ಷಗಳ ರಾಷ್ಟ್ರೀಯ ಹಿರಿಯರ ದಾಖಲೆಯನ್ನು ಮುರಿದಿದ್ದಾನೆ. 
ಗುರುವಾರ ನಡೆದ ಬಾಲಕರ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನಿ ಶಂಕರ್ 2.26 ಮೀ. ಎತ್ತರ ಜಿಗಿಯುವ ಮೂಲಕ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಹರಿ ಶಂಕರ್ ರಾಯ್ 2.25ಮೀ. ಎತ್ತರ ಜಿಗಿದು ಹಿಂದಿನ ರಾಷ್ಟ್ರೀಯ ಹಿರಿಯರ ಮಟ್ಟದ ದಾಖಲೆ ಹೊಂದಿದ್ದರು. 
ಕಳೆದ ಸೆಪ್ಟೆಂಬರ್ ನಲ್ಲಿ ಲಖನೌದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಕೂಟದಲ್ಲಿ ತೇಜಸ್ವಿನ್ ಶಂಕರ್ 2.22 ಮೀ. ಎತ್ತರ ಜಿಗಿದು ಚಿನ್ನದ ಪದಕ ಗೆದ್ದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com