ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್: ಪಂಕಜ್ ಅಡ್ವಾಣಿಗೆ ಕಂಚು

ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ, ದೋಹಾನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನ ಸೆಮಿ ಫೈನಲ್ಸ್ ನಲ್ಲಿ ಆಂಡ್ರ್ಯೂ ಪೆಗೆಟ್ ವಿರುದ್ಧ 2-7 ಅಂತರದಿಂದ ಸೋತಿದ್ದು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್: ಕಂಚಿನ ಪದಕಕ್ಕೆ ತೃಪ್ತಿಪಟ್ಟ ಪಂಕಜ್ ಅಡ್ವಾಣಿ
ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್: ಕಂಚಿನ ಪದಕಕ್ಕೆ ತೃಪ್ತಿಪಟ್ಟ ಪಂಕಜ್ ಅಡ್ವಾಣಿ
ದೋಹಾ: ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ, ದೋಹಾನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನ ಸೆಮಿ ಫೈನಲ್ಸ್ ನಲ್ಲಿ ಆಂಡ್ರ್ಯೂ ಪೆಗೆಟ್ ವಿರುದ್ಧ 2-7 ಅಂತರದಿಂದ ಸೋತಿದ್ದು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 
ಹಾಲಿ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ, ಆಂಡ್ರ್ಯೂ ವಿರುದ್ಧ  14-74, 8-71, 0-87, 78-64, 0-81, 70-37, 7-80, 37-68, 19-74 ಅಂತರದಿಂದ ಸೋತಿದ್ದಾರೆ. ನವೆಂಬರ್ ನಲ್ಲಿ ಈಜಿಪ್ಟ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೀನಾದ ಸ್ಪರ್ಧಿ ವಿರುದ್ಧ ಗೆದ್ದಿದ್ದರು.  
ಡಿ.5 ರಂದು ಪ್ರಾರಂಭವಾಗಲಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಪಂಕಜ್ ಅಡ್ವಾಣಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com