

ನವದೆಹಲಿ: ದೆಹಲಿ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಷ್ಟ್ರ ಮಟ್ಟದ ಕ್ರೀಡಾಪಟುವನ್ನು ಪ್ರಕರಣ ನಡೆದ ಒಂದು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಎಂಬಾತನನ್ನು ದೆಹಲಿಯ ಝರೋದಾ ಕಲಾನ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ದೀಪಕ್ ತನ್ನ ಮನೆಯಲ್ಲಿರುವ ಸೂಚನೆ ಮೇರೆಗೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಣದ ವಿಚಾರವಾಗಿ ಕಳೆದ ವರ್ಷ ದೀಪಕ್ ಸೇರಿದಂತೆ ಮೂವರು ಅಮಿತ್ ಎಂಬುವನ್ನು ಕೊಲೆ ಮಾಡಿದ್ದರು. ಕೊಲೆ ನಡೆದ ನಂತರ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ದೀಪಕ್ ನಾಪತ್ತೆಯಾಗಿದ್ದ. ದೀಪಕ್ ರಾಷ್ಟ್ರ ಮಟ್ಟದ ಶಾಟ್ ಪುಟ್ ಕ್ರೀಡಾಪಟುವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ