ಮಿಯಾಮಿ ಓಪನ್ ಫೈನಲ್: ಸಾನಿಯಾ-ಬಾರ್ಬೆರಾ ಸ್ಟ್ರೈಕೋವಾ ಜೋಡಿಗೆ ಸೋಲು

Published On :
ಮಿಯಾಮಿ: ಮಿಯಾಮಿ ಓಪನ್ ಫೈನಲ್ ಟೆನಿಸ್ ಪಂದ್ಯದಲ್ಲಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅವರ ಜೊತೆ ಆಟಗಾರ್ತಿ ಜೆಕ್ ನ ಬಾರ್ಬೆರಾ ಸ್ಟ್ರೈಕೋವಾ ಚೀನಾದ ಕ್ಸು ಯಿಫಾನ್ ಮತ್ತು ಕೆನಡಾದ ಗ್ರಾಬ್ರಿಲ್ಲಾ ದಬ್ರೋವಸ್ಕಿ ಜೋಡಿ ವಿರುದ್ಧ ಸೋಲನುಭವಿಸಿದ್ದಾರೆ.
ಸಾನಿಯಾ-ಬಾರ್ಬೆರಾ ಜೋಡಿ 4-6 3-6 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿದ್ದು, ಶ್ರೇಯಾಂಕ ರಹಿತ ಎದುರಾಳಿಗಳಿಂದ ಪರಾಭವಗೊಂಡಿದ್ದಾರೆ. ಸುಮಾರು ಒಂದು ಗಂಟೆ ನಡೆದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಬಾರ್ಬೆರಾ ಸ್ಟ್ರೈಕೋವಾ ಗೆ ಕ್ಸು ಯಿಫಾನ್ ಗ್ರಾಬ್ರಿಲ್ಲಾ ದಬ್ರೋವಸ್ಕಿ ಕಠಿಣ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ದಬ್ರೋವಸ್ಕಿ ಹಾಗೂ ಕ್ಸು ಯಿಫಾನ್ ಟಾಪ್ 4 ಶ್ರೇಯಾಂಕ ಆಟಗಾರರನ್ನು ಸೋಲಿಸಿದ್ದರು. ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿ 2015ರಲ್ಲಿ ಮಿಯಾಮಿ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


