ಟೆನ್ನಿಸ್ ಪಂದ್ಯಕ್ಕೆ ಅಡ್ಡಿಯಾದ 'ಆ' ಶಬ್ದ!

ಫ್ರಾನ್ಸಿಸ್ ಟಿಯಾಫೊ ಮತ್ತು ಮಿಚೆಲ್ ಕ್ರೂಗರ್ ನಡುವೆ ಫ್ಲೋರಿಡಾದಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಉಂಟಾದ ಅಡ್ಡಿ ಏನು ಅಂತ ಗೊತ್ತಾದರೆ ನೀವು ಅಚ್ಚರಿ ಪಡುತ್ತೀರಿ. ಅಲ್ಲಲ್ಲ ನಗುತ್ತೀರಿ...
ಟೆನ್ನಿಸ್ ಪಂದ್ಯಕ್ಕೆ ಅಡ್ಡಿಯಾದ 'ಆ' ಶಬ್ದ!
ಟೆನ್ನಿಸ್ ಪಂದ್ಯಕ್ಕೆ ಅಡ್ಡಿಯಾದ 'ಆ' ಶಬ್ದ!
ಮಳೆ ಬಂದಾಗ, ಆಟಗಾರರು ಗಾಯಗೊಂಡಾಗ ಹೀಗೆ ವಿವಿಧ ಕಾರಣ, ಸಂದರ್ಭಗಳಲ್ಲಿ ಟೆನ್ನಿಸ್ ಪಂದ್ಯಕ್ಕೆ ಅಡ್ಡಿ ಉಂಟಾದ ಉದಾಹರಣೆಗಳಿವೆ. ಆದರೆ ಫ್ರಾನ್ಸಿಸ್ ಟಿಯಾಫೊ ಮತ್ತು ಮಿಚೆಲ್ ಕ್ರೂಗರ್ ನಡುವೆ ಫ್ಲೋರಿಡಾದಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಉಂಟಾದ ಅಡ್ಡಿ ಏನು ಅಂತ ಗೊತ್ತಾದರೆ ನೀವು ಅಚ್ಚರಿ ಪಡುತ್ತೀರಿ. ಅಲ್ಲಲ್ಲ ನಗುತ್ತೀರಿ... 
ಫ್ಲೋರಿಡಾದಲ್ಲಿ ಫ್ರಾನ್ಸಿಸ್ ಟಿಯಾಫೊ ಮತ್ತು ಮಿಚೆಲ್ ಕ್ರೂಗರ್ ನಡುವೆ ನಡೆಯಬೇಕಿದ್ದ ಎಟಿಪಿ ಪಂದ್ಯಕ್ಕೆ ವಿಲಕ್ಷಣ ಅಡ್ಡಿ ಉಂಟಾಗಿದೆ. ಅದೂ ಒಂದು ಶಬ್ದದಿಂದ. ಇನ್ನೇನು ಸರ್ವ್ ಮಾಡಬೇಕು ಎಂಬ ಹಂತದಲ್ಲಿ ಆಟಗಾರ ಟಿಯಾಫೋ ಏಕಾಏಕಿ ನಿಲ್ಲಿಸಿ ಟೆನ್ನಿಸ್ ಕೋರ್ಟ್ ನ್ನು ದಿಟ್ಟಿಸಿ ನೋಡಿ ನಗುತ್ತಾರೆ. ಏಕೆಂದರೆ ಅವರಿಗೆ ಟೆನ್ನಿಸ್ ಕೋರ್ಟ್ ನ ಪ್ರದೇಶದಲ್ಲಿ ಜೋರಾಗಿ ಮುಲುಕುವ ಶಬ್ದ ಕೇಳಿಸುತ್ತಿರುತ್ತದೆ. ಆದರೆ ಟಿಯಾಫೋ ಅವರ ಪ್ರತಿಸ್ಪರ್ಧಿಗೆ ಮಾತ್ರ ಪಂದ್ಯದಿಂದ ಬೇರೆಡೆ ಗಮನ ಹರಿಸಲು ಇಷ್ಟವಿರುವುದಿಲ್ಲ. ಶಬ್ದ ಬರುತ್ತಿದೆ ಎಂದುಕೊಳ್ಳಲಾದ ಪ್ರದೇಶದೆಡೆಗೇ ಟೆನ್ನಿಸ್ ಚೆಂಡನ್ನು ಜೋರಾಗಿ ಹೊಡೆಯುವ ಮೂಲಕ ಮಿಚೆಲ್ ಕ್ರೂಗರ್ ತಮ್ಮ ಹತಾಶೆಯನ್ನೂ ವ್ಯಕ್ತಪಡಿಸಿದ್ದರು. 
ಸೆಕ್ಸ್ ನಲ್ಲಿ ತೊಡಗಿರುವವರ "ಆ" ಶಬ್ದ ಯಾವುದೋ ಫೋನ್ ನಿಂದ ಬರುತ್ತಿದೆ ಎಂದು ಪಂದ್ಯದ ಕಾಮೆಂಟೇಟರ್ ಮೈಕ್ ಕೇಷನ್ ಊಹಿಸಿದ್ದರು. "ಇದು ಅತ್ಯಂತ ವಿಲಕ್ಷಣ ಸನ್ನಿವೇಶ, ಇದನ್ನು ಹೇಗೆ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಯಾರದ್ದೋ ಫೋನ್ ನಲ್ಲಿ ಅಡಲ್ಟ್ ವಿಡಿಯೋ ಪ್ಲೇ ಆಗುತ್ತಿದೆ" ಎಂದು ಲೈವ್ ಸ್ಟ್ರೀಮ್ ನಲ್ಲಿಯೇ ಹೇಳಿದರು ಮೈಕ್ ಕೇಷನ್. ಇದಾದ ಕೆಲವು ಹೊತ್ತಿನಲ್ಲಿ ನಿಂತುಹೋದ "ಆ" ಶಬ್ದ, ನಂತರದ ಕ್ಷಣಗಳಲ್ಲಿ ಮತ್ತಷ್ಟು ಹೆಚ್ಚಾಗತೊಡಗಿತು. ಆನಂತರವೇ ಅದು ಫೋನ್ ನಿಂದ ಬರುತ್ತಿದ್ದ ಶಬ್ದವಲ್ಲ, ಬದಲಾಗಿ ಲೇಕ್ ಬಳಿ ಇದ್ದ ಅಪಾರ್ಟ್ ಮೆಂಟ್ ನಿಂದ ಬರುತ್ತಿದ್ದ ಶಬ್ದ ಎಂಬುದು ಅರ್ಥವಾಗಿ "ಇಲ್ಲ ಅದು  ಫೋನ್ ನಿಂದ ಬರುತ್ತಿರುವ ಶಬ್ದವಲ್ಲ ಅಪಾರ್ಟ್ ಮೆಂಟ್ ನಿಂದ ಬರುತ್ತಿರುವ ಶಬ್ದ ಎಂದರು ಮೈಕ್ ಕೇಷನ್.   
ಹೆಚ್ಚಾದಂತೆಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ಕಿವಿ ಮುಚ್ಚಿಕೊಳ್ಳಲು ಹೇಳುವಂತೆ ಮಾಡಿದ್ದ "ಆ" ಶಬ್ದದಿಂದ ಪಂದ್ಯಕ್ಕೆ ಕೆಲಕಾಲ ಅಡಚಣೆ ಉಂಟಾಯಿತಾದರೂ, ಟೆನ್ನಿಸ್ ಕೋರ್ಟ್ ನಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ನಗಗಡಲಲ್ಲಿ ತೇಲಿಸಿತ್ತು. ಅಷ್ಟೇ ಅಲ್ಲದೇ ತುಸು ಮುಜುಗರವನ್ನೂ ಉಂಟು ಮಾಡಿತ್ತು. ವಿರಾಮದ ನಂತರ ಟಿಯಾಫೊ 6-3, 6-2 ಸೆಟ್ ಗಳ ಅಂತರದಿಂದ ತಮ್ಮ ಎದುರಾಳಿ ಮಿಚೆಲ್ ಕ್ರೂಗರ್ ನ್ನು ಮಣಿಸಿ ಪಂದ್ಯವನ್ನು ಗೆದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com