ಸೆರೆನಾ ವಿಲಿಯಮ್ಸ್‌ಗೆ ಹುಟ್ಟುವ ಮಗು ಯಾವ ಬಣ್ಣದ್ದಿರಬಹುದು: ನಸ್ತಾಸೆ ವಿವಾದಾತ್ಮಕ ಹೇಳಿಕೆ

ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇತ್ತೀಚೆಗೆ ತಾವು 20 ವಾರಗಳ ಗರ್ಭೀಣಿ ಎಂದು ಬಹಿರಂಗಪಡಿಸಿದ್ದು ಇದಕ್ಕೆ ಇಂಗ್ಲೆಂಡ್...
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್
Updated on: 
ನ್ಯೂಯಾರ್ಕ್: ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇತ್ತೀಚೆಗೆ ತಾವು 20 ವಾರಗಳ ಗರ್ಭೀಣಿ ಎಂದು ಬಹಿರಂಗಪಡಿಸಿದ್ದು ಇದಕ್ಕೆ ಇಂಗ್ಲೆಂಡ್ ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ ಇಲಿಯೆ ನಸ್ತಾಸೆ ವಿವಾದಾತ್ಮಕ ಹೇಳಿಕೆಯ ನೀಡಿದ್ದಾರೆ. 
ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿದ್ದು ಅವರಿಗೆ ಹುಟ್ಟುವ ಮಗು ಯಾವ ಬಣ್ಣವಿರಬಹುದೆಂದು ನಸ್ತಾಸೆ ತಮಾಷೆ ಮಾಡಿದ್ದರು. ಈ ಬಗ್ಗೆ ಆಕ್ಷೇಪಿಸಿರುವ ಸೆರೆನಾ ವಿಲಿಯಮ್ಸ್ ಇದು ಜನಾಂಗೀಯ ನಿಂದನೆಯಾಗಿದ್ದು ನಸ್ತಾನೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 
ನಸ್ತಾಸೆ ಹೇಳಿಕೆಯನ್ನು ಬ್ರಿಟಿಷ್ ಮತ್ತು ರೋಮೇನಿಯಾ ಪತ್ರಿಕೆಗಳು ವರದಿ ಮಾಡಿದ್ದು ಸೆರೆನಾಗೆ ಹುಟ್ಟುವ ಮಗು ಯಾವ ಬಣ್ಣದ್ದಿರಬಹುದು? ಚಾಕೋಲೇಟ್ ಹಾಲಿನೊಂದಿಗಿರುವ ಬಣ್ಣವಿರಬಹುದೇ? ಕಪ್ಪುವರ್ಣೀಯರಾದ ಸೆರೆನಾ ಬಿಳಿಯ ವ್ಯಕ್ತಿಯೊಬ್ಬರಿಂದ ಗರ್ಭ ಧರಿಸಿದ್ದಾರೆನ್ನಲಾಗಿದ್ದು ಹೀಗಾಗಿ ನಸ್ತಾನೆ ಈ ಮೇಲಿನ ರೀತಿ ಹೇಳಿದ್ದಾರೆ ಎನ್ನಲಾಗಿದೆ. 
ಇನ್ನು ಸೆರೆನಾ ಅವರ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ 2 ಬಾರಿ ಗ್ರ್ಯಾನ್ ಸ್ಲಾಮ್ ವಿಜೇತ ನಸ್ತಾನೆ, ಇನ್ನು ಐಟಿಎಫ್ ನ ಯಾವುದೇ ಕೂಟಗಳಲ್ಲಿ ಯಾವುದೇ ರೀತಿಯ ಪಾತ್ರವಹಿಸಿದಂತೆ ನಿಷೇಧ ಏರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com