ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಆಮಿರ್ ಖಾನ್!

ಬ್ರಿಟನ್ ಸ್ಟಾರ್ ಬಾಕ್ಸರ್ ಆಮಿರ್ ಖಾನ್ ತನ್ನ ಪತ್ನಿ ಫರ್ಯಾಲ್ ಮಖ್ಡೂಮ್ ಮತ್ತೋರ್ವ ಬಾಕ್ಸರ್ ಆಂಥೋನಿ ಜೋಶ್ವಾ ಜತೆ ಅನೈತಿಕ ಸಂಬಂಧ ಹೊಂದಿದ್ದಾಗಿ...
ಆಮಿರ್ ಖಾನ್-ಫರ್ಯಾಲ್ ಮಖ್ಡೂಮ್
ಆಮಿರ್ ಖಾನ್-ಫರ್ಯಾಲ್ ಮಖ್ಡೂಮ್
ಲಂಡನ್: ಬ್ರಿಟನ್ ಸ್ಟಾರ್ ಬಾಕ್ಸರ್ ಆಮಿರ್ ಖಾನ್ ತನ್ನ ಪತ್ನಿ ಫರ್ಯಾಲ್ ಮಖ್ಡೂಮ್ ಮತ್ತೋರ್ವ ಬಾಕ್ಸರ್ ಆಂಥೋನಿ ಜೋಶ್ವಾ ಜತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. 
ಪತ್ನಿ ಅನೈತಿಕ ಸಂಬಂಧ ಹೊಂದಿರುವುದನ್ನು ಆಮಿರ್ ಖಾನ್ ಸರಣಿ ಟ್ವೀಟ್ ಗಳ ಮೂಲಕ ಬಹಿರಂಗಪಡಿಸಿದ್ದು ಅಲ್ಲದೆ ತಾನು ವಿಚ್ಛೇದನ ನೀಡುತ್ತಿರುವುದಾಗಿಯೂ ಟ್ವೀಟರ್ ನಲ್ಲೇ ಪ್ರಕಟಿಸಿದ್ದಾರೆ. 
2013ರ ಮೇನಲ್ಲಿ ಆಮಿರ್ ಖಾನ್ ಫರ್ಯಾಲ್ ರನ್ನು ವಿವಾಹವಾಗಿದ್ದರು. 30 ವರ್ಷದ ಆಮಿರ್ ಖಾನ್ ಪಾಕ್ ಮೂಲದವರಾಗಿದ್ದು ಪತ್ನಿ 26 ವರ್ಷದ ಫರ್ಯಾಲ್ ಅಮೆರಿಕ ಮೂಲದವರು. ದಂಪತಿಗೆ ಮೂರು ವರ್ಷದ ಪುತ್ರಿ ಇದ್ದಾಳೆ. 2014ರಲ್ಲಿ ಆಮಿರ್ ಖಾನ್ 95 ಕೋಟಿ ರುಪಾಯಿ ಸಂಪಾದಿಸಿದ್ದು ಆ ವರ್ಷ ವಿಶ್ವದ 6ನೇ ಶ್ರೀಮಂತ ಬಾಕ್ಸರ್ ಎನಿಸಿದ್ದರು. 
ಆಮಿರ್ ಖಾನ್ ಪತ್ನಿ ಫರ್ಯಾಲ್ ನನಗೆ ನೋವು ತಂದಿದ್ದಾಳೆ. ಆದರೆ ನಾನು ಫೈಟರ್. ಇದನ್ನು ಎದುರಿಸಬಲ್ಲೆ. ಬೇರೆಯಾಗಲು ಪತ್ನಿ ಕೂಡ ಈಗ ಒಪ್ಪಿಕೊಂಡಿದ್ದಾಳೆ ಎಂದು ಟ್ವೀಟರ್ ನಲ್ಲೇ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com