ನವದೆಹಲಿ: ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಪ್ರವೀಣ್ ರಾಣಾ ಬೆಂಬಲಿಗರು ನಿನ್ನೆ ರಿಯಲ್ ಆಗಿ ಹೊಡೆದಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಪಿಂಕ್ ಪದವ ವಿಜೇತ್ ಸುಶೀಲ್ ಕುಮಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಶನಿವಾರ ಕೇಸ್ ದಾಖಲಿಸಿದ್ದಾರೆ.
ಸುಶೀಲ್ ಕುಮಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷೆನ್ 323 ಹಾಗೂ 341ರಡಿ ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ದೆಹಲಿ ಕೇಂದ್ರ ಉಪ ಪೊಲೀಸ್ ಆಯುಕ್ತ ಎಂಎಸ್ ರಂಧವ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಕಾಮನ್ ವೆಲ್ತ್ ಅರ್ಹತಾ ಪಂದ್ಯದಲ್ಲಿ ಸುಶೀಲ್ ಕುಮಾರ್ ವಿಜೇತರಾದ ನಂತರ ಇಬ್ಬರು ಕುಸ್ತಿ ಪಟುಗಳ ಬೆಂಬಲಗರ ನಡುವೆ ಹೊಡೆದಾಟ ನಡೆದಿತ್ತು.
ಈ ವೇಳೆ ಪ್ರವೀಣ್ ಕುಮಾರ್ ಅಣ್ಣ, ಬೆಂಬಲಿಗರು ಮತ್ತು ಸುಶೀಲ್ ಕುಮಾರ್ ಬೆಂಬಲಿಗರ ನಡುವೆ ಕಾದಾಟ ಸಂಭವಿಸಿತ್ತು.