ಸೋಲಿಲ್ಲದ ಸರದಾರ ವಿಜೇಂದರ್‌ಗೆ ಮುಂದಿನ ಎದುರಾಳಿ ಚೀನಾದ ಜುಲ್ಪಿಕರ್

ಭಾರತದ ಸ್ಟಾರ್ ಬಾಕ್ಸರ್, ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ವಿಜೇಂದರ್ ಸಿಂಗ್ ತಮ್ಮ ಮುಂದಿನ ವೃತ್ತಿಪರ ಬಾಕ್ಸಿಂಗ್ ಸೆಣಸಾಟದಲ್ಲಿ ಚೀನಾದ ಅಗ್ರ...
ವಿಜೇಂದರ್ ಸಿಂಗ್, ಜುಲ್ಪಿಕರ್ ಮೈಮಯ್ತ್ ಅಲಿ
ವಿಜೇಂದರ್ ಸಿಂಗ್, ಜುಲ್ಪಿಕರ್ ಮೈಮಯ್ತ್ ಅಲಿ
ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್, ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ವಿಜೇಂದರ್ ಸಿಂಗ್ ತಮ್ಮ ಮುಂದಿನ ವೃತ್ತಿಪರ ಬಾಕ್ಸಿಂಗ್ ಸೆಣಸಾಟದಲ್ಲಿ ಚೀನಾದ ಅಗ್ರ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಅಲಿಯನ್ನು ಎದುರಿಸಲಿದ್ದಾರೆ. 
ವಿಜೇಂದರ್ ಸಿಂಗ್-ಜುಲ್ಪಿಕರ್ ನಡುವಿನ ಪಂದ್ಯ ಏಪ್ರಿಲ್ 1 ರಂದು ಮುಂಬೈನಲ್ಲಿ ನಡೆಯಲಿದೆ.
ಡಬ್ಲ್ಯೂಬಿಒ ಓರಿಯೆಂಟಲ್ ಸೂಪರ್ ಮಿಡಲ್ ವೇಟ್ ಚಾಂಪಿಯನ್ ಜುಲ್ಪಿಕರ್ ವಿರುದ್ಧ ಗೆದ್ದರೆ ವಿಜೇಂದರ್ ಗೆ ವೃತ್ತಿಜೀವನದ 2ನೇ ಬೆಲ್ಟ್ ಒಲಿಸಿಕೊಳ್ಳುವ ಅವಕಾಶವಿದೆ. ವಿಜೇಂದರ್ ಸದ್ಯ ಆಡಿರುವ 8 ಪಂದ್ಯಗಳಲ್ಲೂ ಅಜೇಯರಾಗಿದ್ದಾರೆ. ಇದೀಗ 9ನೇ ವೃತ್ತಿಪರ ಹೋರಾಟದಲ್ಲಿ ವಿಜೇಂದರ್ ತಮ್ಮ ಬೆಲ್ಟ್ ಕೂಡ ಪಣಕ್ಕಿಡಲಿದ್ದಾರೆ. 
ಚೀನಾದ ನಂಬರ್ 1 ಬಾಕ್ಸರ್ ಆಗಿರುವ 22 ವರ್ಷದ ಜುಲ್ಪಿಕರ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ವಿಜೇಂದರ್ ಅಷ್ಟೇ ಅನುಭವಿಯಾಗಿದ್ದಾರೆ. 2015ರಲ್ಲೇ ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿದ್ದ ಜುಲ್ಪಿಕರ್ 8 ಪಂದ್ಯಗಳನ್ನು ಆಡಿದ್ದು 5 ನಾಕೌಟ್ ಸೇರಿ 7 ಪಂದ್ಯದಲ್ಲಿ ಗೆದ್ದಿದ್ದಾರೆ. ಇದರಲ್ಲಿ 1 ಪಂದ್ಯ ಡ್ರಾ ಫಲಿತಾಂಶ ಕಂಡಿದೆ. ಕಳೆದ ವರ್ಷ ಅನುಭವಿ ಬಾಕ್ಸರ್ ಥಾಮಸ್ ಮಶಾಲಿಯನ್ನು ಮಣಿಸಿ ವೃತ್ತಿಜೀವನದ ಚೊಚ್ಚಲ ಬೆಲ್ಟ್ ಅನ್ನು ಜುಲ್ಪಿಕರ್ ಜಯಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com