ವೃತ್ತಿಪರ ಬಾಕ್ಸಿಂಗ್ ನಲ್ಲಿ ಹಂಗೇರಿಯದ ಬೆಡೋ ಜತೆ ಸೆಣೆಸಲಿರುವ ಸರಿತಾದೇವಿ

ಮಾಜಿ ವಿಶ್ವ ಚಾಂಪಿಯನ್ ಎಲ್ ಸರಿತಾದೇವಿ ವೃತ್ತಿಪರ ಬಾಕ್ಸಿಂಗ್ ಗೆ ಪಾದಾರ್ಪಣೆ ಮಾಡಿದ್ದು ಜನವರಿ 29ರಂದು ಹಂಗೇರಿಯಾದ ಜಸೋಫಿಯಾ ಬೆಡೋ ವಿರುದ್ಧ...
ಸರಿತಾದೇವಿ
ಸರಿತಾದೇವಿ
ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ಎಲ್ ಸರಿತಾದೇವಿ ವೃತ್ತಿಪರ ಬಾಕ್ಸಿಂಗ್ ಗೆ ಪಾದಾರ್ಪಣೆ ಮಾಡಿದ್ದು ಜನವರಿ 29ರಂದು ಹಂಗೇರಿಯಾದ ಜಸೋಫಿಯಾ ಬೆಡೋ ವಿರುದ್ಧ ಸೆಣೆಸಲಿದ್ದು, ಮಣಿಪುರದ ಇಂಫಾಲದಲ್ಲಿ ಪಂದ್ಯ ನಡೆಯಲಿದೆ. 
31 ವರ್ಷದ ಸರಿತಾದೇವಿ 2006ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಮತ್ತು 2014ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. 
ಹಂಗೇರಿಯಾದ ಬಾಕ್ಸರ್ 29 ವರ್ಷದ ಜಸೋಫಿಯಾ ಬೆಡೋ 2007ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಗೆ ಪಾದಾರ್ಪಣೆ ಮಾಡಿದ್ದು ಈಗಾಗಲೇ 19 ಬಾರಿ ಜಯ ಸಾಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com