ನವದೆಹಲಿ: ವಿಶ್ವದ ಶ್ರೀಮಂತ ಫುಟ್ಬಾಲಿಗರ ಪೈಕಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಫೋಸ್ಟ್ ಬೆಲೆ ಬರೋಬ್ಬರಿ 2.58 ಕೋಟಿ ರುಪಾಯಿ ಅಂತೆ.
ಹೌದು ಅವರು ಪೋಸ್ಟ್ ಮಾಡುವ ಯಾವುದೇ ಪೋಟೋ ಅಥವಾ ವಿಡಿಯೋ ಬೆಲೆ ಬರೋಬ್ಬರಿ 310000 ಪೌಂಡ್ ಆಗಿದೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ.
ಇನ್ನು ರೊನಾಲ್ಡೊ ಸರಿಸುಮಾರು 10.4 ಕೋಟಿ ಹಿಂಬಾಲಕರನ್ನು ಹೊಂದಿದ್ದು ಪ್ರತಿ ಪೋಸ್ಟ್ ಗೆ ಕನಿಷ್ಠ 30 ಲಕ್ಷ ಲೈಕ್ ಗಳು ಬರುತ್ತವೆ ಎಂದು ಅಂದಾಜಿಸಲಾಗಿದೆ.
ಇನ್‌ಸ್ಟಾಗ್ರಾಂ ಶ್ರೀಮಂತರ ಲಿಸ್ಟ್ ಪಟ್ಟಿಯಲ್ಲಿ ರೊನಾಲ್ಡೊ 3ನೇ ಸ್ಥಾನದಲ್ಲಿದ್ದರೆ ಗಾಯಕಿ ಸೆಲೆನಾ ಗೊಮೆಜ್ ಮೊದಲ ಸ್ಥಾನದಲ್ಲಿದ್ದಾರೆ.