ಹೆಚ್ ಎಸ್ ಪ್ರಣಯ್ ಮುಡಿಗೆ ಯುಎಸ್ ಗ್ರಾಂಡ್ ಪಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೈಟಲ್

Published On :
ನವದೆಹಲಿ: ಪರುಪಳ್ಳಿ ಕಶ್ಯಪ್ ಅವರನ್ನು ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಹೆಚ್ಎಸ್ ಪ್ರಣಯ್ ಯುಎಸ್ ಗ್ರಾಂಡ್ ಪಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೈಟಲ್ ನ್ನು ಮುಡಿಗೇರಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದ ಅನಹೀಮ್ ನಲ್ಲಿ ಅಮೆರಿಕ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 21-15, 20-22, 21-12 ಸೆಟ್ ಗಳ ಅಂತರದಿಂದ ಎದುರಾಳಿ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನು ಮಣಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಗುಣಮುಖರಾಗಿ ವಾಪಸಾದ ಕಶ್ಯಪ್ 21 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದರು, ಪ್ರಣಯ್ ಕೂಡ ಗಾಯದ ಸಮಸ್ಯೆಗಳಿಂದ ಹೊರಬಂದು ಅಮೆರಿಕ ಓಪನ್‌ನ ಪ್ರಶಸ್ತಿಯ ಫೈನಲ್ ಪಂದ್ಯವನ್ನಾಡಿದ್ದರು.
ಭಾರತದ ಇಬ್ಬರು ಫೈನಲ್ ನಲ್ಲಿ ಸೆಣೆಸಿರುವ ಎರಡನೇ ಟೂರ್ನಿ ಇದಾಗಿದ್ದು, ಏಪ್ರಿಲ್‌ನಲ್ಲಿ ನಡೆದ ಸಿಂಗಪುರ ಓಪನ್‌ನಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಬಿ.ಸಾಯಿಪ್ರಣೀತ್ ಫೈನಲ್ ತಲುಪಿದ್ದರು. ಪ್ರಣೀತ್ ಜಯ ಸಾಧಿಸಿದ ಸೂಪರ್ ಸರಣಿಯ ಚೊಚ್ಚಲ ಪ್ರಶಸ್ತಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Shuttler H S PrannoyUS Open Grand Prix Gold badmintonಹೆಚ್ ಎಸ್ ಪ್ರಣಯ್ಯುಎಸ್ ಗ್ರಾಂಡ್ ಪಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೈಟಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


