ಇಂಡೋನೇಷ್ಯಾ ಓಪನ್ ಟೈಟಲ್ ಗೆದ್ದ ಶ್ರೀಕಾಂತ್

ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಡಂಬಿ ಶ್ರೀಕಾಂತ್
ಕಿಡಂಬಿ ಶ್ರೀಕಾಂತ್
ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಕಿಡಂಬಿ ಶ್ರೀಕಾಂತ್ ಜಪಾನ್ ನ ಕಝುಮಾಸಾ ಸಕೈ ಅವರನ್ನು ಮಣಿಸಿದ್ದು, ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ನ್ನು ತಮ್ಮದಾಗಿಸಿಕೊಂಡಿದ್ದಾರೆ. 
ಸುಮಾರು 37 ನಿಮಿಷಗಳ ಹೋರಾಟದಲ್ಲಿ 21-11 21-19 ಸೆಟ್ ಗಳ ಅಂತರದಿಂದ ಜಪಾನ್ ನ ಎದುರಾಳಿಯನ್ನು ಶ್ರೀಕಾಂತ್ ಜಯಿಸಿದ್ದಾರೆ. ಕೊರಿಯಾದ ಸನ್‌ ವಾನ್‌ ಹೊ ಅವರನ್ನು ಮಣಿಸಿ ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ಗೇರಿದ್ದರು.
ಶ್ರೀಕಾಂತ್ ಅವರ 2 ನೇ ಸೂಪರ್ ಸೀರೀಸ್ ಪ್ರೀಮಿಯರ್ ಟೈಟಲ್ ಇದಾಗಿತ್ತು. 2014 ರ ಚೀನಾ ಓಪನ್ ಟೈಟಲ್ ನ ಸೂಪರ್ ಸೀರೀಸ್ ಪ್ರೀಮಿಯರ್ ನಲ್ಲಿ ಶ್ರೀಕಾಂತ್ ಗೆಲುವು ಸಾಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com