ಮೊಸಳೆಗೆ ಆಹಾರವಾದ ಯುವ ಫುಟ್ಬಾಲ್ ಆಟಗಾರ ಎಸ್ಟೆವೊ ಆಲ್ಬೆರ್ಟೊ ಗಿನೊ

ಆಫ್ರಿಕಾದ ಮಪುಟೊದಲ್ಲಿನ ಮೊಜಾಂಬಿಕ್ ನಲ್ಲಿ ಯುವ ಫುಟ್ಬಾಲ್ ಆಟಗಾರ 19 ವರ್ಷದ ಎಸ್ಟೆವೊ ಆಲ್ಬೆರ್ಟೊ ಗಿನೊ ಮೊಸಳೆಗೆ ಆಹಾರವಾಗಿದ್ದಾರೆ...
ಎಸ್ಟೆವೊ ಆಲ್ಬೆರ್ಟೊ ಗಿನೊ
ಎಸ್ಟೆವೊ ಆಲ್ಬೆರ್ಟೊ ಗಿನೊ
ಮಪುಟೊ: ಆಫ್ರಿಕಾದ ಮಪುಟೊದಲ್ಲಿನ ಮೊಜಾಂಬಿಕ್ ನಲ್ಲಿ ಯುವ ಫುಟ್ಬಾಲ್ ಆಟಗಾರ 19 ವರ್ಷದ ಎಸ್ಟೆವೊ ಆಲ್ಬೆರ್ಟೊ ಗಿನೊ ಮೊಸಳೆಗೆ ಆಹಾರವಾಗಿದ್ದಾರೆ. 
ಸ್ಥಳೀಯ ಫುಟ್ಬಾಲ್ ಕ್ಲಬ್ ನದಿ ತೀರದಲ್ಲಿ ಟೂರ್ನಿಯೊಂದನ್ನು ಆಯೋಜಿಸಿತ್ತು. ಕಳೆದ ಗುರುವಾರ ರಾತ್ರಿ ಜಾಗಿಂಗ್ ಮಾಡುತ್ತಿದ್ದ ವೇಳೆ ದಡದಲ್ಲಿದ್ದ ಮೊಸಳೆ ಏಕಾಏಕಿ ಆಲ್ಬೆರ್ಟೊ ಮೇಲೆರಗಿದೆ. 
ಮೊಸಳೆ ಮೇಲೆರಗಿದ್ದರಿಂದ ರಕ್ಷಣೆಗಾಗಿ ಅವರು ಅಂಗಲಾಚಿದರೂ ಅಷ್ಟರಲ್ಲಾಗಲೇ ಮೊಸಳೆ ಆತನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದ್ದರಿಂದ ಇತರೆ ಆಟಗಾರರು ರಕ್ಷಣೆಗೆ ಧಾವಿಸಲು ಸಾಧ್ಯವಾಗಲಿಲ್ಲ ಎಂದು ಮೊಜಾಂಬಿಕನ್ ಕ್ಲಬ್ ಸದಸ್ಯರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com