ಥೇಟ್ ಮೆಸ್ಸಿಯನ್ನೇ ಹೋಲುವಂತೆ ಇರುವ ಇರಾನಿನ ರೆಜಾ ಪರೇಸ್ತೇಶ್ ಇರಾನ್ ನಲ್ಲಿ ಹೆಚ್ಚು ಜನಪ್ರಿಯನಾಗಿದ್ದು ಆತನ ಜತೆ ಸೆಲ್ಫೀ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ರೆಜಾ ಪರೇಸ್ತೇಶ್ ರಸ್ತೆ ಮೇಲೆ ಬರುತ್ತಿದ್ದಂತೆ ಜನರು ಅವನನ್ನು ಮುತ್ತಿಕೊಳ್ಳಲುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಉಂಟಾಗಿ ಈತನನ್ನು ಬಂಧಿಸಲು ಪೊಲೀಸರು ಮುಂದಾದ ಘಟನೆ ಸಹ ನಡೆದಿವೆ.