ಅಂಡರ್ 23 ಸೀನಿಯರ್ ವಿಶ್ವ ಕುಸ್ತಿ ಪಂದ್ಯಾವಳಿ: ಭಾರತದ ರಿತು ಪೋಗಟ್ ಗೆ ಬೆಳ್ಳಿ ಪದಕ

ಪೋಲೆಂಡಿನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ರಿತು ಪೋಗಟ್ ಬೆಳ್ಳಿ ಪದಕ ಜಯಿಸಿದ್ದಾರೆ.
ರಿತು ಫೊಗಟ್
ರಿತು ಫೊಗಟ್
ವಾರ್ಸಾ: ಪೋಲೆಂಡಿನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ರಿತು ಪೋಗಟ್ ಬೆಳ್ಳಿ ಪದಕ ಜಯಿಸಿದ್ದಾರೆ.
ಪೋಗಟ್ ಅವರು ಬಲ್ಗೇರಿಯಾದ ಸೆಲಿಷ್ಕ ಅವರನ್ನು 4-2 ಅಂಕಗಳಿಂದ ಮಣಿಸಿ ಈ ಸಾಧನೆಗೈದರು.
ಇನ್ನು ಇದೇ ಪಂದ್ಯದಲ್ಲಿ  ಟರ್ಕಿಯ ಡೆಮಿರಾ ಅವರು 4-4  ಅಂಕಗಳೊಡನೆ ಚಿನ್ನದ ಪದಕ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಿಇಂದೋರ್ ನಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಜಯಿಸಿದ್ದ ಪೋಗಟ್ ಮೇ ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com