ಫ್ರೆಂಚ್ ಓಪನ್ ಸೂಪರ್ ಸೀರೀಸ್: ಸೆಮಿಫೈನಲ್ ಪ್ರವೇಶಿಸಿದ ಭಾರತದ ಪಿವಿ ಸಿಂಧು

ಭಾರತದ ಬ್ಯಾಡ್ಮಿಂಟನ್ ಶಟ್ಲರ್ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸೀರೀಸ್ ನಲ್ಲಿ ಸೆಮಿಫೈನಲ್ ಗೇರಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಚೆನ್ ಯೂಫೀ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ಶಟ್ಲರ್ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸೀರೀಸ್ ನಲ್ಲಿ ಸೆಮಿಫೈನಲ್ ಗೇರಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಚೆನ್ ಯೂಫೀ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಕೇವಲ 41 ನಿಮಿಷಗಳಲ್ಲೇ ಪಂದ್ಯವನ್ನು ಗೆದ್ದು ಪಿವಿ ಸಿಂಧು ಸೆಮಿಫೈನಲ್ ಗೇರಿದ್ದಾರೆ. ಚೀನಾದ ಚೆನ್ ಯೂಫೀ ವಿರುದ್ಧ 21-14, 21-14  ನೇರ ಸೆಟ್ ಗಳ ಅಂತರದಲ್ಲಿ ಪಿವಿ ಸಿಂಧು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇದು ಪಿವಿ  ಸಿಂಧು-ಚೀನಾದ ಚೆನ್ ಯೂಫೀ ನಡವಿನ ಐದನೇ ಪಂದ್ಯವಾಗಿದ್ದು, ಈ ಪಂದ್ಯಕ್ಕೂ ಮುನ್ನು ಸಿಂಧು ಚೆನ್ ಯೂಫೀ ವಿರುದ್ಧ 2 ಪಂದ್ಯದಲ್ಲಿ ಗೆದ್ದು, 2 ಪಂದ್ಯದಲ್ಲಿ ಸೋತಿದ್ದರು. ಈ ಪಂದ್ಯದ ಗೆಲುವಿನ ಮೂಲಕ ಸಿಂಧು ತಮ್ಮ ಗೆಲುವಿನ  ಅಂತರವನ್ನು 3-2ಕ್ಕೆ ಏರಿಸಿಕೊಂಡಿದ್ದಾರೆ.
ಅಂತೆಯೇ ಕಳೆದ ತಿಂಗಳು ನಡೆದ ಮಲೇಷ್ಯಾ ಓಪನ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋತಿದ್ದ ಸೇಡನ್ನು ಸಿಂಧು ಈ ಪಂದ್ಯದ ಗೆಲುವಿನ ಮೂಲಕ ತೀರಿಸಿಕೊಂಡಿದ್ದಾರೆ.
ಸಿಂಧುರೊಂದಿಗೆ ಸೆಮೀಸ್ ಹಂತಕ್ಕೆ ಸಾಗಿದ ಭಾರತದ ಪುರುಷರು
ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಮತ್ತು ಪ್ರಣೋಯ್ ರಾಯ್ ಕೂಡ ಸೆಮಿಫೈನಲ್ ಹಂತಕ್ಕೇರಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಶ್ರೀಕಾಂತ್ ಚೀನಾದ ಶಿಯೂಕಿ ವಿರುದ್ಧ 8-21, 21-19, 21-19 ನೇರ ಸೆಟ್ ಗಳ ಅಂತರದಲ್ಲಿ ಗೆದ್ದರು. ಇನ್ನು ಪ್ರಣೋಯ್ ರಾಯ್ ದಕ್ಷಿಣ ಕೊರಿಯಾದ ಜಿಯಾನ್ ಹಯಾಕ್ ಜಿನ್ ವಿರುದ್ಧ 21-16, 21-16ರ ಅಂತರದಲ್ಲಿ ಗೆದ್ದು, ಸೆಮಿ ಪೈನಲ್ ಗೇರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com