ಏಷ್ಯನ್ ಗೇಮ್ಸ್ 2018: ಶಾಟ್ ಪುಟ್ ನಲ್ಲಿ ಚಿನ್ನ ಗೆದ್ದ ತಾಜಿಂದರ್ ಪಾಲ್ ಸಿಂಗ್

Published On :
ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಶನಿವಾರ ಶಾಟ್ ಪುಟ್ ತಾಜಿಂದರ್ ಪಾಲ್ ಸಿಂಗ್ ತೂರ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾರತದ ತಾಜೀಂದರ್ ಪಾಲ್ ಸಿಂಗ್ ಚಿನ್ನ ಗೆದ್ದಿದ್ದು, ತಾಜಿಂದರ್ 20.75 ಮೀಟರ್ ದೂರಕ್ಕೆ ಗುಂಡನ್ನು ಎಸೆಯುವ ಮೂಲಕ ಈ ದಾಖಲೆ ನಿರ್ಮಿಸಿದರು. ತಮ್ಮ ಐದನೇ ಪ್ರಯತ್ನದಲ್ಲಿ ತಾಜೀಂದರ್ ಪಾಲ್ ಸಿಂಗ್ ಅತ್ಯಂತ ದೂರಕ್ಕೆ ಚೆಂಡನ್ನು ಎಸೆಯುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕ ಗಳಿಸಿದರು. ಇದು ಭಾರತಕ್ಕೆ ಕೂಟದ 7ನೇ ದಿನ ದೊರೆತ ಮೊದಲ ಚಿನ್ನದ ಪದಕವಾಗಿದೆ. ಅಂತೆಯೇ ಒಟ್ಟಾರೆ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ 7ನೇ ಚಿನ್ನದ ಪದಕವಾಗಿದೆ.
ಸ್ಕ್ವಾಷ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿಗೆ ತೃಪ್ತಿ ಪಟ್ಟುಕೊಂಡ ಸೌರವ್ ಘೋಶಾಲ್
ಮತ್ತೊಂದೆಡೆ ಸ್ಕ್ವಾಷ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೌರವ್ ಘೋಶಾಲ್ ಕೂಡ ಪದಕ ಗೆದ್ದಿದ್ದು, ಇಂದು ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಸೌರವ್ ಘೋಷಾಲ್ ಹಾಂಕಾಂಗ್ ನ ಚುಂಗ್ ಮಿಂಗ್ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆJakartaಜಕಾರ್ತಾಸೌರವ್ ಘೋಶಾಲ್Asian Games 2018ಏಷ್ಯನ್ ಗೇಮ್ಸ್ 2018Tajinderpal Singh ToorSaurav Ghoshalತಾಜಿಂದರ್ ಪಾಲ್ ಸಿಂಗ್ ತೂರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


