ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಾಲ್ಕು ದಿನಗಳ ಕಾಲ WWE ಆಡಳಿತ ವರ್ಗ ಪ್ರತಿಭಾ ಶೋಧ ನಡೆಸಲಿದೆ. ಮೂಲಗಳ ಪ್ರಕಾರ ಭಾರತದಿಂದ WWE 40 ಪ್ರತಿಭೆಗಳನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ 40 ಮಂದಿ ಸ್ಪರ್ಧಾಳುಗಳಿಗೆ ಅಮೆರಿಕದ ಒರ್ಲಾಂಡೋದಲ್ಲಿರುವ WWE ಪರ್ಫಾರ್ಮೆನ್ಸ್ ಸೆಂಟರ್ ನಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ವೇಳೆ ಸ್ಪರ್ಧಿಗಳಿಗೆ ವಿವಿಧ ಬಗೆಯ ಕ್ರೀಡೆಗಳು, ಅಂದರೆ ಕುಸ್ತಿ, ಕಬ್ಬಡ್ಡಿ, ರಸ್ಲಿಂಗ್, ಅಮೆರಿಕನ್ ಫುಟ್ಬಾಲ್, ಬಾಸ್ಕೆಟ್ ಬಾಲ್, ಕ್ರಿಕೆಟ್, ದೇಹದಾರ್ಢ್ಯ ಮತ್ತು ಯುದ್ಧ ಕ್ರೀಡೆಗಳ ತರಬೇತಿ ನೀಡಲಾಗುತ್ತದೆ ಎಂದು WWE ಮೂಲಗಳು ತಿಳಿಸಿವೆ.